ಶಿವಮೊಗ್ಗ ಜಿಲ್ಲೆಯ ಭದ್ರಾವತಿ-2 ತಾಲೂಕಿನ 1752ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಭದ್ರಾವತಿ-2 ತಾಲೂಕಿನಲ್ಲಿ ನಡೆದ 1752ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಉಪ ಅಧೀಕ್ಷಕರಾದ (ASP) ಶ್ರೀ ಸುನಿಲ್ ಕುಮಾರ್ ಭೂಮರೆಡ್ಡಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ ಈ ಕಾರ್ಯಕ್ರಮವು ಅಭೂತಪೂರ್ಣ ಕಾರ್ಯಕ್ರಮವಾಗಿದ್ದು, ನಭೂತೋ ನಭವಿಷ್ಯತೆ ಎಂಬುದಾಗಿ ಕಾರ್ಯಕ್ರಮದ ವಿಶೇಷತೆಯನ್ನು ತಿಳಿಸಿದರು ಮತ್ತು ನಿಜವಾಗಿ ಸಮಾಜ ಪರಿವರ್ತನಾ ಕಾರ್ಯಕ್ರಮವಾಗಿದೆ ಕುಡಿತದ ದಾಸರಾಗಿ ಇಡೀ ಕುಟುಂಬದ ವ್ಯವಸ್ಥೆಯನ್ನೇ ಹಾಳು ಮಾಡುವ ಈ ದುಶ್ಚಟಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರು ಈ ಶಿಬಿರಗಳ ಮುಖಾಂತರ ಪರಿಹಾರವನ್ನು ನೀಡಿರುತ್ತಾರೆ‌. ಇದರ ಪ್ರಯೋಜನವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಸಿಗುವ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂಬುದಾಗಿ ತಿಳಿಸಿದರು. ಕಾರ್ಯಕ್ರಮದ ಆಶಯ ನುಡಿಗಳನ್ನು ಆಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿವಮೊಗ್ಗ ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಜೆ ರವರು ಕಳೆದ ಎಂಟು ದಿನಗಳಲ್ಲಿ ಶಿಬಿರಾರ್ಥಿಗಳನ್ನು ಅತ್ಯಂತ ಜವಾಬ್ದಾರಿಯಿಂದ ನಾವು ನೋಡಿಕೊಂಡಿರುತ್ತೇವೆ. ಇನ್ನು ಮುಂದೆ ಕುಟುಂಬದ ಸದಸ್ಯರು ಅತ್ಯಂತ ಪ್ರೀತಿ ಗೌರವದಿಂದ ನೋಡಿಕೊಳ್ಳಬೇಕು ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ನವಜೀವನ ಸಮಿತಿಯ ಸಭೆಯನ್ನು ನಡೆಸಿ ಉತ್ತಮ ಜೀವನವನ್ನು ನಡೆಸುವಂತೆ ಮಾಹಿತಿ ನೀಡಿದರು.ಭದ್ರಾವತಿಯ ಮುಖಂಡರಾದ ಬಿ.ಕೆ ಮೋಹನ್ ಕುಮಾರ್ ರವರು ಮಾತನಾಡಿ ಮದ್ಯಪಾನಕ್ಕೆ ದಾಸರಾಗಿ ಸಮಾಜದಿಂದ ದೂರಕ್ಕೆ ತಳ್ಳಲ್ಪಟ್ಟ ಮದ್ಯ ವ್ಯಸನಿಗಳನ್ನು ಒಂದು ಕಡೆ ಸೇರಿಸಿ ಜೀವನದ ಮೌಲ್ಯಗಳನ್ನು ತಿಳಿಸಿ ಪರಿವರ್ತನೆ ಮಾಡುವ ಅದ್ಭುತ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಪರಮಪೂಜ್ಯರು ಮಾಡುವುದು ಶ್ಲಾಘನೀಯವಾಗಿದೆ ಎಂದರು. ಶಿವಮೊಗ್ಗ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಉದಯಕುಮಾರ್ ಶೆಟ್ಟಿ ಇವರು ಮಾತನಾಡಿ ಶಿಬಿರಾರ್ಥಿಗಳು ತಮ್ಮ ಮದ್ಯಪಾನಾದಿ ದುಶ್ಚಟಗಳನ್ನು ಬಿಟ್ಟು ಸುಖ ಜೀವನ ನಡೆಸಬೇಕೆಂದು ಕರೆ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ 1752ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಎಂ.ಎಲ್ ಯಶೋಧರಯ್ಯ ರವರು ಮಾತನಾಡಿ ಇಡೀ ಶಿಬಿರದ ಸಂಘಟನೆಗೆ ಮತ್ತು ನಿರ್ವಹಣೆಗೆ ನಾವೆಲ್ಲರೂ ರಾತ್ರಿ ಹಗಲೆನ್ನದೆ ದುಡಿದಿರುತ್ತೇವೆ ನೀವು ನಿಮ್ಮ ಮುಂದಿನ ಜೀವನದಲ್ಲಿ ಪಾನಮುಕ್ತ ಜೀವನವನ್ನು ಮಾಡಿದಲ್ಲಿ ಮಾತ್ರ ನಾವು ಮಾಡಿರುವ ಈ ಶಿಬಿರಕ್ಕೆ ಸಾರ್ಥಕತೆ ಸಿಗುತ್ತದೆ. ಇದೇ ನೀವು ನಮಗೆ ಕೊಡುವ ಪ್ರತಿಫಲ ಎಂಬುದಾಗಿ ತಿಳಿಸಿದರು. ಮತ್ತು ಮದ್ಯವರ್ಜನ ಶಿಬಿರದ ಯಶಸ್ವಿಗಾಗಿ ತನು-ಮನ-ಧನ ಸಹಕಾರದೊಂದಿಗೆ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷೀಯ ನೆಲೆಯಲ್ಲಿ ಅಭಿನಂದಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಎಂ ಪಾಲಾಕ್ಷಪ್ಪ, ಸದಸ್ಯರುಗಳಾದ ಶ್ರೀ ಆರ್.ಕರುಣಾಮೂರ್ತಿ, ಶ್ರೀಮತಿ ಪಾರ್ವತಮ್ಮ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾದ ಹಾಗೂ ಸಂತೋಷ್ ರೈಸ್ ಮಿಲ್ ನ ಮಾಲಕರಾದ ಶ್ರೀ ಸುಧಾಕರ್ ಶೆಟ್ಟಿ, ಶ್ರೀ ರಾಮೇಶ್ವರ ಸಮುದಾಯ ಭವನದ ಅಧ್ಯಕ್ಷರು ಹಾಗೂ ಸಮಿತಿಯ ಉಪಾಧ್ಯಕ್ಷರಾದ ಶ್ರೀ ರಮೇಶ್, ಗಣ್ಯರಾದ ಶ್ರೀಮತಿ ಕಾವೇರಮ್ಮ, ಸಮಿತಿಯ ಕೋಶಾಧಿಕಾರಿಯಾದ ಶ್ರೀ ಮಹೇಶ್, ಯೋಗ ಶಿಕ್ಷಕರಾದ ಶ್ರೀ ಮಾದೇಗೌಡ, ಸಮಿತಿಯ ಸದಸ್ಯರಾದ ಶ್ರೀ ದೇವೇಂದ್ರ ಗಿರಿ, ಊರಿನ ದಾನಿಗಳು, ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಉದ್ದೇಶ ಕುರಿತು ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಶ್ರೀ ನಾಗರಾಜ್ ಕುಲಾಲ್ ಇವರು ಪ್ರಾಸ್ತಾವಿಕ ಮಾತನಾಡಿದರು.ಶಿಬಿರಾರ್ಥಿಯಾದ ಶ್ರೀ ಪ್ರಸನ್ನ ಕುಮಾರ್ ರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.