ಶಿವಮೊಗ್ಗ ಜಿಲ್ಲೆಯ ಜಿಲ್ಲಾ ವೇದಿಕೆಯ ಪದಗ್ರಹಣ ಕಾರ್ಯಕ್ರಮ ಮತ್ತು ತೀರ್ಥಹಳ್ಳಿ ತಾಲೂಕಿನ ನವಜೀವನ ಸಮಾವೇಶ ಶಾಂತವೇರಿ ಗೋಪಾಲಗೌಡರ ಸಮುದಾಯ ಭವನ ತೀರ್ಥಹಳ್ಳಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಡಾ. ಜಿವಂದರ್ ಜೈನ್ ರವರು ಪೂಜ್ಯ ಖಾವಂದರು ಸಾಮಾಜಿಕವಾಗಿ ಧಾರ್ಮಿಕವಾಗಿ ಕೌಟುಂಬಿಕವಾಗಿ ವಿಶೇಷವಾದ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಿದ್ದು ಅದನ್ನ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಿದ್ದರು. ಜನಜಾಗೃತಿ ವೇದಿಕೆಯ ಮೂಲಕ ಶಿಬಿರಗಳನ್ನು ಆಯೋಜಿಸಿ ವ್ಯಕ್ತಿ ಮತ್ತು ಕುಟುಂಬದ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ವಿಪತ್ತು ನಿರ್ವಹಣೆಯ ಕರೆಗಳನ್ನು ವಿತರಣೆ ಮಾಡಿ DYSP ಅವರು ಮಾತನಾಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಜಾಗೃತಿ ಮೂಡಿಸುತ್ತಾ ಇದೆ. ವಿಪತ್ತು ಘಟಕದ ಸ್ವಯಂಸೇವಕರ ಮೂಲಕ ಮುಂದಿನ ದಿನಗಳಲ್ಲಿ ಆಗಬಹುದಾದ ವಿಪತ್ತುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಅವಶ್ಯಕತೆ ಇದ್ದಲ್ಲಿ ನಿಮ್ಮ ಸಹಾಯ ನಮಗೆ ಬೇಕು ಸಹಕರಿಸಿ ಎಂದು ಮನವಿ ಮಾಡಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿ ಪಾಯಸ್ ನವಜೀವನ ಸಮಿತಿ ಸದಸ್ಯರಿಗೆ ಮತ್ತು ಶೌರ್ಯ ಘಟಕದ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡುತ್ತಾ ಪರಮಪೂಜ್ಯರು ನಮ್ಮ ಹೊಸ ಬದುಕಿಗೆ ಒಂದು ಸುಂದರವಾದ ಅವಕಾಶ ನೀಡಿದ್ದಾರೆ. ನಮ್ಮ ಪಾನಾಮುಕ್ತ ಸಂಘಟನೆಯನ್ನು ಮಾಡಿ ಉಳಿದವರಿಗೆ ಮಾದರಿಯಾಗಿ ಬದುಕಬೇಕು. ಇಲ್ಲಿಯವರೆಗೆ ನಡೆಯುತ್ತಿದ್ದ ನಾವು ಇನ್ನು ಓಡುತ್ತಾ ಯಶಸ್ಸನ್ನ ಕಾಣಬೇಕು ಎಂದು ಆಶಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ವೇದಿಕೆ ಪದಾಧಿಕಾರಿಗಳು, ಜಿಲ್ಲಾ ನಿರ್ದೇಶಕರು ತಾಲೂಕು ಯೋಜನಾಧಿಕಾರಿಗಳು ಪ್ರಾದೇಶಿಕ ಯೋಜನಾಧಿಕಾರಿಗಳು ಆರೋಗ್ಯ ಸಹಾಯಕರು ಮೇಲ್ವಿಚಾರಕರು ಉಪಸ್ಥಿತರಿದ್ದರು.
