ಬೆಂಗಳೂರು ಪ್ರಾದೇಶಿಕ ವಿಭಾಗದ ತುಮಕೂರು-2 ಜಿಲ್ಲೆಯ ಶಿರಾ-2 ಯೋಜನಾ ಕಛೇರಿ ವ್ಯಾಪ್ತಿಯ ಶಿರಾ ವಲಯದ ಶ್ರೀ ವಿದ್ಯಾಗಣಪತಿ ಕಲ್ಯಾಣ ಮಂಟಪದಲ್ಲಿ ನಡೆದ 1860 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಡಾ.ಹನುಮಂತನಾಥ ಸ್ವಾಮೀಜಿಗಳು ಕುಂಚಿಟಿಗರಮಹಾಸಂಸ್ಥಾನ ಮಠ ಎಲೆರಾಂಪುರ ಶ್ರೀಗಳು ವಹಿಸಿ ಸಮಾಜದಲ್ಲಿ ಕತ್ತಲೆ ಇರುವ ಅನೇಕ ಕುಟುಂಬಗಳಿಗೆ ಅಣತೆಯಂತೆ ಬೆಳಕನ್ನು ನೀಡುವ ಕಾರ್ಯವನ್ನು ಮಾಡುತ್ತಿರುವಂತಹ ಏಕೈಕ ಧಾರ್ಮಿಕ ಕ್ಷೇತ್ರ ಧಾರ್ಮಿಕ ಗುರುಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಾತ್ರ ಎಂದರು. ಸಮಾಜದಲ್ಲಿ ಸರ್ವಧರ್ಮಗಳ ಸಮಾಗಮನವನ್ನು ಕಾಣಲು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಸ್ಥಳದ ಕಾರ್ಯಕ್ರಮಗಳಲ್ಲಿ ಮಾತ್ರ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಸುವ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮಲ್ಲಿ ಮುಸಲ್ಮಾನ ದಂಪತಿಗಳು ಪೂಜೆಗೆ ಕುಳಿತು ಪೂಜೆಯನ್ನು ಮಾಡುತ್ತಿರುವುದು ಪೂಜ್ಯ ವೀರೇಂದ್ರ ಹೆಗ್ಗಡೆಯವರಿಂದ ಮಾತ್ರ ಸಾದ್ಯ ಎಂದು ತಿಳಿಸಿದರು. ಮದ್ಯವರ್ಜನ ಶಿಬಿರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮೂಲಕ ಆಶೀರ್ವಚನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಶೀನಪ್ಪ ಎಂ. ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸಮಗ್ರವಾಗಿ ತಿಳಿಸಿದರು ಹಾಗೂ ಗಾಂಧೀಜಿಯವರು ಕಂಡಂತಹ ರಾಮರಾಜ್ಯದ ಕನಸನ್ನು ಪೂಜ್ಯರು ಮದ್ಯವರ್ಜನ ಶಿಬಿರಗಳನ್ನು ಸಮಾಜಕ್ಕೆ ನೀಡುವ ಮೂಲಕ ನನಸನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಜನಜಾಗೃತಿ ವೇದಿಕೆಯ ಸಮಗ್ರ ಕಾರ್ಯಕ್ರಮಗಳನ್ನು ತಿಳಿಸುವ ಮೂಲಕ ಶಿಬಿರಾರ್ಥಿಗಳಿಗೆ, ಶಿಬಿರಾರ್ಥಿಗಳ ಕುಟುಂಬಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.
