ಶಿರಸಿ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿ ನಡೆಯುತ್ತಿರುವ 1782ನೇ ಮದ್ಯವರ್ಜನ ಶಿಬಿರದ ಪ್ರಥಮ ದಿನ ಪ್ರಾರಂಭಗೊಂಡು ಉದ್ಘಾಟಕರಾದ ಶ್ರೀ ನಾರಾಯಣ ಭಟ್ ಧರೆ ಅಧ್ಯಕ್ಷರು ಶಿಕ್ಷಣ ಸೇವಾ ಸಮಿತಿ ಹೆಗ್ಗರಣೆ ಇವರು ದೀಪ ಬೆಳಗಿಸುವುದರ ಮೂಲಕ ಶುಭ ಹಾರೈಕೆ ಮಾಡಿರುತ್ತಾರೆ. ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ರಮೇಶ್ ರಾಮಗೌಡ ಅಧ್ಯಕ್ಷತೆಯನ್ನು ವಹಿಸಿಕೊಂಡಿರುತ್ತಾರೆ. ಮುಖ್ಯ ಅತಿಥಿಗಳಾಗಿ ಶ್ರೀ. ಎ.ಬಾಬು ನಾಯ್ಕ ನಿರ್ದೇಶಕರು ಶ್ರೀ.ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ ( ರಿ ) ಶಿರಸಿ, ಶ್ರೀ.ಎಮ್.ಎಲ್. ಭಟ್ ಅಧ್ಯಕ್ಷರು ಸೇವಾ ಸಹಕಾರಿ ಸಂಘ ಹೆಗ್ಗರಣೆ, ಶ್ರೀಮತಿ ಅನ್ನಪೂರ್ಣ ಗಣೇಶ್ ಚನ್ನಯ್ಯ ಅಧ್ಯಕ್ಷರು ಗ್ರಾಮ ಪಂಚಾಯತಿ ಹೆಗ್ಗರಣೆ, ಶ್ರೀಮತಿ ಪದ್ಮಾವತಿ ಮಾಬ್ಲೇಶ್ವರ ಗೌಡ ಅಧ್ಯಕ್ಷರು ಗ್ರಾಮ ಪಂಚಾಯಿತಿ ತಂಡಾಗುಂಡಿ, ಶ್ರೀ ರಾಜಾರಾಮ ಅಧ್ಯಕ್ಷರು ಗ್ರಾಮ ಪಂಚಾಯಿತಿ ಆರ್ ಹೆಗಡೆ ಅಧ್ಯಕ್ಷರು ಗ್ರಾಮ ಪಂಚಾಯತ್ ನಿಲ್ಕುಂದ, ರವೀಂದ್ರ ಹಾಸ್ಯಗಾರ ಅಧ್ಯಕ್ಷರು ಜನವಿಕಾಸ ಸೌಹಾರ್ದ ಸೇವಾ ಸಹಕಾರಿ ಸಂಘ, ಶ್ರೀಮತಿ ಗೌರಿ ನಾಯ್ಕ ಉಪಾಧ್ಯಕ್ಷರು ಜ.ಜಾ.ವೇ. ಶಿರಸಿ ಜಿಲ್ಲೆ, ವಿವೇಕಾನಂದ ರಾಯ್ಕರ್ ಸದಸ್ಯರು ಜ.ಜಾ.ವೇ.ಸಿರ್ಸಿ ಜಿಲ್ಲೆ, ಶ್ರೀ ರಮೇಶ್ ಹೆಗಡೆ ಹಾರ್ಸಿ ಮನೆ ಸದಸ್ಯರು ಜ.ಜಾ.ವೇ. ಶಿರಸಿ, ಶ್ರೀಮತಿ ಲಕ್ಷ್ಮಿರಾಜ ಸದಸ್ಯರು ಜ.ಜಾ.ವೇ.ಸಿರ್ಸಿ, ಶ್ರೀ. ಸುಭಾಸ್ ಎಚ್.ನಾಯ್ಕ್ ನಿಕಟಪೂರ್ವ ಅಧ್ಯಕ್ಷರು ಜ. ಜಾ. ವೇ. ಶಿರಸಿ ಜಿಲ್ಲೆ, ಯೋಗ ಶಿಕ್ಷಕರಾದ ಶ್ರೀ ಗಣಪತಿ ಹೆಗಡೆ ಹಿರೇ ಕೈ, ಯೋಜನಾಧಿಕಾರಿ ಪ್ರಭಾಕರ ನಾಯ್ಕ್ ಶ್ರೀ. ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ (ರಿ ) ಸಿದ್ದಾಪುರ, ತಾಲೂಕಿನ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ನವಜೀವನ ಸದಸ್ಯರು, ಶೌರ್ಯ ತಂಡದ ಸದಸ್ಯರು ಉಪಸ್ಥಿತರಿದ್ದರು.
