ಶಿಕಾರಿಪುರ ಯೋಜನಾ ಕಛೇರಿ ವ್ಯಾಪ್ತಿಯ ಶಿರಾಳಕೊಪ್ಪ ವಲಯದಲ್ಲಿ 1737ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ),ಶಿಕಾರಿಪುರ ತಾಲ್ಲೂಕು ಶಿರಸಿ ಜಿಲ್ಲೆ ಇಂದು ಶಿಕಾರಿಪುರ ಯೋಜನಾ ಕಛೇರಿ ವ್ಯಾಪ್ತಿಯ ಶಿರಾಳಕೊಪ್ಪ ವಲಯದಲ್ಲಿ 1737ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮದ್ಯವರ್ಜನ ಶಿಬಿರವನ್ನು ವೇದಿಕೆಯಲ್ಲಿರುವ ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಮುಖ್ಯ ಅತಿಥಿಗಳಾಗಿ ಶಿರಸಿ ಜಿಲ್ಲಾ ನಿರ್ದೇಶಕರಾದ ಶ್ರೀ ಎ ಬಾಬು ನಾಯ್ಕ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ ಹಾಗೂ ಜನಜಾಗೃತಿ ಕಾರ್ಯಕ್ರಮದ ಪರಿಚಯದೊಂದಿಗೆ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದಲ್ಲಿ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಮಾನ್ಯ ಜನಜಾಗೃತಿ ಯೋಜನಾಧಿಕಾರಿಯವರಾದ ಶ್ರೀ ಗಣೇಶ್ ಆಚಾರ್ಯ ಸರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ಶ್ರೀ ಹೇಮಪ್ಪ ಜಂಬಾಲಿ ಅಧ್ಯಕ್ಷರು ಶ್ರೀ ಚನ್ನಬಸವೇಶ್ವರ ದೇವಸ್ಥಾನ ಬಸವನಂದಿಹಳ್ಳಿ, ಶ್ರೀ ಎಂ ಆರ್ ಗಿರೀಶ್ ಗೌರವ ಅಧ್ಯಕ್ಷರು ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಶಿರಾಳಕೊಪ್ಪ, ಶ್ರೀ ಮಂಜುನಾಥ ಎಸ್ ಕೆ ಪೋಲೀಸ್ ಉಪನಿರೀಕ್ಷಕರು ಶಿರಾಳಕೊಪ್ಪ ಪೋಲೀಸ್ ಠಾಣೆ, ಶ್ರೀಮತಿ ಗೌರಿ ರಾಜು ನಾಯ್ಕ ಉಪಾಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ, ಶ್ರೀಮತಿ ಕೆ ನಿವೇದಿತಾ ರಾಜು ನಿಕಟಪೂರ್ವ ಕೆ. ಎಸ್. ಡಿ. ಎಲ್ ನಿರ್ದೇಶಕಿ ಕರ್ನಾಟಕ ಸರ್ಕಾರ, ಶ್ರೀ ಚನ್ನವೀರ ಶೆಟ್ಟಿ ಮಾಜಿ ಅಧ್ಯಕ್ಷರು ಪಟ್ಟಣ ಪಂಚಾಯಿತಿ ಶಿರಾಳಕೊಪ್ಪ
ಶ್ರೀ ಪ್ರೇಮ್ ಕುಮಾರ್ ಮಾಜಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ, ಶ್ರೀ ಅಗಡಿ ಅಶೋಕ ನಿರ್ದೇಶಕರು ಕರ್ನಾಟಕ ಮಾರ್ಕೆಟಿಂಗ್ ಫೆಡರೇಶನ್, ಶ್ರೀ ನಾಗರಾಜ್ ಆಚಾರ್ಯ ಅಧ್ಯಕ್ಷರು ಕಾಳಿಕಾಂಬ ವಿಶ್ವಕರ್ಮ ದೇವಸ್ಥಾನ ಶಿರಾಳಕೊಪ್ಪ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹೆಚ್. ಎಸ್. ಯೋಗಿರಾಜ್ (ಅಧ್ಯಕ್ಷರು, 1737ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಶಿರಾಳಕೊಪ್ಪ)ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ನಂಜುಂಡಿ ಆರ್, ಶಿರಾಳಕೊಪ್ಪ ವಲಯ ಮೇಲ್ವಿಚಾರಕರಾದ ಶ್ರೀಮತಿ ಅಮಿತಾ, ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಕೆ, ಶಿಬಿರಾದಿಕಾರಿ ಶ್ರೀ ವಿದ್ಯಾದರ, ಆರೋಗ್ಯ ಸಹಾಯಕಿ ಶ್ರೀಮತಿ ಫಿಲೋಮಿನಾ, ಹಾಗೂ ನವಜೀವನ ಸಮಿತಿ ಸದಸ್ಯರು ಸೇವಕರು, ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು/ಪದಾಧಿಕಾರಿಗಳು, ಪ್ರಗತಿಬಂಧು/ಸ್ವಸಹಾಯ ಸಂಘದ ಸದಸ್ಯರು, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಶಿಕಾರಿಪುರ ತಾಲ್ಲೂಕಿನ ಎಲ್ಲಾ ಮೇಲ್ವಿಚಾರಕರು, ತಾಲೂಕಿನ ಸೇವಾಪ್ರತಿನಿಧಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.