ವ್ಯಸನಮುಕ್ತರ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಡಾ| ಮೇಖಲಾ ದಿವಾಕರ್ ರವರಿಗೆ ಸನ್ಮಾನ

Janajagurthi Vedike News

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಶೋಧನ ಕೇಂದ್ರದಲ್ಲಿ ನಡೆಯುವ ಮದ್ಯವರ್ಜನ ಶಿಬಿರಗಳಿಗೆ ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ಮತ್ತು ಸಲಹೆ ನೀಡುತ್ತಾ ಬಂದಿರುವ ಇವರು ತಮ್ಮ ಉನ್ನತ ವ್ಯಾಸಂಗಕ್ಕಾಗಿ ಸಂಶೋಧನೆಯ ಸಂದರ್ಭ ಬಂದಾಗ ಇದೇ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಶೋಧನ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾದ ವ್ಯಸನಿಗಳ ಅಂಕಿ ಅಂಶಗಳ ಆಧಾರದ ಮೇಲೆ “ವ್ಯಸನದಿಂದ ಬಳಲುತ್ತಿರುವ ರೋಗಿಗಳಲ್ಲಿ ಆಲ್ಕೊಹಾಲ್ ಬಳಕೆಯ ತೀವ್ರತೆ ಮತ್ತು ಬದಲಾವಣೆಯಲ್ಲಿ ಆಧ್ಯಾತ್ಮಿಕತೆಯ ಮಹತ್ವ” (Severity of alcohol use, readiness to change and religiously in patients seeking de addiction treatment) ಕುರಿತಾಗಿ ವಿಸ್ತಾರವಾದ ಸಂಶೋಧನಾ ಪ್ರಬಂಧವನ್ನು ತಯಾರಿಸಿ ಪೂಜ್ಯರಿಗೆ ಹಸ್ತಾಂತರಿಸಿರುತ್ತಾರೆ.