ವಿಶ್ವ ಪರಿಸರ ದಿನಾಚರಣೆ ಅಂಗವಾಗಿ & ಸಾಮಾಜಿಕ ಅರಣ್ಯ ಗಿಡ ನಾಟಿ

Janajagurthi Vedike News

ಯಳಂದೂರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ & ಸಾಮಾಜಿಕ ಅರಣ್ಯ ನಾಟಿ ಯ ಅಡಿಯಲ್ಲಿ ಹೆಗ್ಗವಾಡಿ ಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನಾಟಿ ಹಾಗೂ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ತಾಲೂಕಿನ ಶಾಸಕರಾದ ಶ್ರೀ ಯುತ ಎನ್ ಮಹೇಶ್ ರವರು ಚಾಲನೆ ನೀಡಿ ಗಿಡ ನಾಟಿ ಮಾಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಮಹದೇವಸ್ವಾಮಿ, ಯೋಜನಾಧಿಕಾರಿ ಪ್ರವೀಣ್ ಎಂ ಎಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವುಕುಮಾರ್, ಮನು, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರವಿ,ಕೃಷಿ ಮೇಲ್ವಿಚಾರಕ ಪ್ರವೀಣ್,ವಲಯದ ಮೇಲ್ವಿಚಾರಕ ಧನಪಾಲ್, ಪತ್ರಕರ್ತರು,ಸೇವಾಪ್ರತಿನಿಧಿ, ಸದಸ್ಯರು ಉಪಸ್ಥಿತರಿದ್ದರು.