ಶಹಾಪುರ ತಾಲೂಕಿನ ಹೋತಪೇಟ ವಲಯದ ಬಿ ಗುಡಿ ಕಾರ್ಯಕ್ಷೇತ್ರದ ಕೃಷಿ ವಿಶ್ವವಿದ್ಯಾಲಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ.11.06.2025 ರಂದು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಮೊದಲಿಗೆ ಸಸಿಗೆ ನೀರು ಉಣಿಸುವ ಮೂಲಕ ಕೃಷಿ ವಿಶ್ವವಿದ್ಯಾಲಯದ ಡೀನ ಆದ ಡಾಕ್ಟರ ಪ್ರಕಾಶ್ ಕುಚುನೂರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ಕಲ್ಲಪ್ಪ.ಯಾವಗಲ್ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಡೆಯುವಂತಹ ಕಾರ್ಯಕ್ರಮಗಳ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ನಂತರ ಸಂಪನ್ಮೂಲ ವ್ಯಕ್ತಿಯದ ರಾಮ್ ರಾವ್ ಕುಲಕರ್ಣಿ ಸರ್. ಅವರು ದುಶ್ಚಟಗಳಿಂದ ಆಗುವ ಪರಿಣಾಮಗಳ ಬಗ್ಗೆ ಮತ್ತು ಈಗಿನ ಡಿಜಿಟಲೀಕರಣದ ಯುಗದಲ್ಲಿ ಬದಲಾವಣೆ ಆಗುತ್ತಿದೆ ಅದೇ ರೀತಿಯಾಗಿ ಮನುಷ್ಯರೂ ಕೂಡ ಅದರ ತಕ್ಕ ಹಾಗೆ ಬದಲಾವಣೆ ಹೊಂದುತ್ತಿದ್ದು ಧೂಮಪಾನ ಮದ್ಯಪಾನ ಸೇವನೆಗಳಿಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮನಮುಟ್ಟುವ ಹಾಗೆ ಮಾಹಿತಿಯನ್ನು ನೀಡಿದರು ಅದೇ ರೀತಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೆ ಎಲ್ಲ ಕ್ಷೇತ್ರದಲ್ಲಿಯೂ ಕೂಡ ಸಮಾಜದಲ್ಲಿ ಉತ್ತಮ ಕೊಡುಗೆಯನ್ನು ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಶೇಖರ್ ಸಾತಿಹಾಳ ಸರ್. ಅವರು ಗೌರವ ವ್ಯಕ್ತಪಡಿಸಿದರು ಈ ಕಾರ್ಯಕ್ರಮದಲ್ಲಿ ಡಾಕ್ಟರ್ ರಾಜ್ ಚೌವ್ಹಾಣ. ಡಾಕ್ಟರ್ ಶ್ರೀಮತಿ ಸಂಗೀತಾ R. P ಪಾಟೀಲ ಉಪನ್ಯಾಸಕರು ಇದ್ದರು ಗೋಗಿ ಮೇಲ್ವಿಚಾರಕರಾದ ಮಂಜುನಾಥ ಅವರು ಸ್ವಾಗತಿಸಿದರು ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಣುಕಾ ಎಸ್ ಗಣಿ ನಿರೂಪಣೆ ಮಾಡಿದರು ಈ ಕಾರ್ಯಕ್ರಮದ ಕುರಿತು ವಿದ್ಯಾರ್ಥಿ ರಮೇಶ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
