ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ.

Janajagurthi Vedike Uncategorized

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಧರ್ಮಸ್ಥಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ಪರಮಪೂಜ್ಯ ಡಾII ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾII ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ “ಜಾಗೃತಿಸೌಧ” ದಲ್ಲಿ 256ನೇ ವಿಶೇಷ ಮದ್ಯವರ್ಜನ ಶಿಬಿರ ( 1981ನೇ ರಾಜ್ಯ ಮಟ್ಟದ ಶಿಬಿರ ) ಉದ್ಘಾಟನೆಗೊಂಡಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶಿಬಿರದ ವೈದ್ಯಾಧಿಕಾರಿ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ವೈದ್ಯರಾದ ಡಾl ಶ್ರೀ ಮೋಹನದಾಸ ಗೌಡ ಇವರು ನೆರವೇರಿಸಿದರು.
ಶ್ರೀ ವಿವೇಕ್ ವಿನ್ಸೆಂಟ್ ಪಾಯಸ ಮಾನ್ಯ ಪ್ರಾದೇಶಿಕ ನಿರ್ದೇಶಕರು, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಇವರು ಜನಜಾಗೃತಿ ವೇದಿಕೆಯ ಹುಟ್ಟು, ಬೆಳವಣಿಗೆ, ನಡೆದು ಬಂದ ಹಾದಿ ಮತ್ತು ಅಸಾಮಾನ್ಯ ಸಾಧನೆಗಳ ಪರಿಚಯದೊಂದಿಗೆ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳು, ಶಿಬಿರಾರ್ಥಿಗಳು ಮತ್ತು ಅವರ ಕುಟುಂಬದವರನ್ನು ಸ್ವಾಗತಿಸಿದರು.ಶ್ರೀ ವಿಠಲ್ ಪೂಜಾರಿ,ನಿರ್ದೇಶಕರು, ಜ್ಞಾನ ವಿಕಾಸ ವಿಭಾಗ ಕೇಂದ್ರ ಕಚೇರಿ, ಧರ್ಮಸ್ಥಳ *ಶ್ರೀ ಹರಿಶ್ಚಂದ್ರ ತೆಂಡೂಲ್ಕರ್ ಜನಜಾಗೃತಿ ವೇದಿಕೆ ಸದಸ್ಯರು, ಕಾರ್ಕಳ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ವಸಂತ್,ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಚಿಕ್ಕನಾಯಕನಹಳ್ಳಿ, ಶ್ರೀ ಕಿಶೋರ್ ಪ್ರಬಂಧಕರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಆಪ್ತ ಸಮಾಲೋಚಕರಾದ ಮಧು, ಶಿಬಿರಾಧಿಕಾರಿಗಳಾದ ಶ್ರೀ ದಿನೇಶ್, ಜಯಾನಂದ ಆರೋಗ್ಯ ಸಹಾಯಕರಾದ , ಶ್ರೀಮತಿ ನೇತ್ರಾವತಿ, ಪ್ರಭಾ ಇವರುಗಳು ಉಪಸ್ಥಿತರಿದ್ದರು.*
ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ವಿಶೇಷ ಶಿಬಿರಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳು ಭಾಗವಹಿಸಿದ್ದರು.ನವಜೀವನ ಸಮಿತಿಯ ಸದಸ್ಯರುಗಳು ತಮ್ಮ ವೈಯಕ್ತಿಕ ಪರಿಚಯದೊಂದಿಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಸಂಶೋಧನಾ ಕೇಂದ್ರದ ಸಿಬ್ಬಂದಿಗಳು, ಸ್ವಯಂ ಸೇವಕರು ಮತ್ತು ನವಜೀವನ ಸಮಿತಿ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಜನಜಾಗೃತಿ ವೇದಿಕೆಯ ಸಿಬ್ಬಂದಿಗಳು ಸಾಮೂಹಿಕ ದೇವಗೀತೆ ಮತ್ತು ಧ್ಯೇಯಗೀತೆಯೊಂದಿಗೆ ಪ್ರಾರ್ಥಿಸಿ, ದಿನೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಸೂಕ್ತ ಸೂಚನೆಗಳೊಂದಿಗೆ ಜನಜಾಗೃತಿಯ ಆಡಳಿತಾತ್ಮಕ ಯೋಜನಾಧಿಕಾರಿಗಳು ಶ್ರೀ ಮಾಧವ ಗೌಡ  ವಂದಿಸಿದರು.