ಶ್ರೀ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ದಿನಾಂಕ ೦೮.೦೨.೨೦೨೧ ರಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ .|| ಎಲ್.ಹೆಚ್ ಮಂಜುನಾಥ್ ರವರು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳ ಮನೆಯವರು ಉಪಸ್ಥಿತರಿದ್ದು ಕುಟುಂಬ ಜೀವನದ ಬಗ್ಗೆ ಸವಿಸ್ತಾರವಾಗಿ ಮನಮುಟ್ಟುವಂತೆ ಮಾರ್ಗದರ್ಶನ ನೀಡಿದರು. ಮನಸ್ಸನ್ನು ಹತೋಟಿ ಮಾಡಿಕೊಳ್ಳುವುದು ಧ್ಯಾನ ಮತ್ತು ಭಜನೆಯ ಮಹತ್ವ, ಗುರು ಹಿರಿಯರಿಗೆ ಗೌರವಿಸುವುದು , ಕೌಟುಂಬಿಕ ಜೀವನ ನಡೆಸುವ ದಾರಿ, ಶತದಿನೋತ್ಸವ ಹೀಗೆ ಯಶಸ್ಸಿನ ದಾರಿಯಲ್ಲಿ ಮುನ್ನಡೆಯಲು ಮಾರ್ಗದರ್ಶನ ನೀಡಿರುತ್ತಾರೆ.
