ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿಸಿ ಟ್ರಸ್ಟ್ ರಿಜಿಸ್ಟರ್,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಿರಾಜಪೇಟೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ ವಿರಾಜಪೇಟೆ ಹಾಗೂ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಸಹಯೋಗದೊಂದಿಗೆ ಗಾಂಧಿ ಸ್ಮೃತಿ ಹಾಗೂ ನವ ಜೀವನ ಸಮಿತಿ ಸದಸ್ಯರ ಸಮಾವೇಶ ವಿರಾಜಪೇಟೆ ತಾಲೂಕು ಅಮ್ಮತಿ ವಲಯ GMP ಶಾಲಾ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಕೇಚಂಡ ಅಶ್ವಿನಿ ತಿಮ್ಮಯ್ಯ ಅಧ್ಯಕ್ಷರು ಅಮ್ಮತಿ ಗ್ರಾಮ ಪಂಚಾಯತ್ ಇವರು ವಹಿಸಿಕೊಂಡಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಿ ಎಸ್ ಶಿವರುದ್ರ ವೃತ್ತ ನಿರೀಕ್ಷಕರು ವಿರಾಜಪೇಟೆ ವೃತ್ತ ಇವರ ನೆರವೇರಿಸಿ ದುಶ್ಚಟಗಳಿಗೆ ಬಲಿಯಾಗದ ಹಾಗೆ ಹಾಗೂ ಮದ್ಯಪಾನ ಮಾಡಿ ಅದರ ಮಲಿನಲ್ಲಿ ಆಗುವ ಸಮಸ್ಯೆಗಳ ಸಮಸ್ಯೆಗಳ ಬಗ್ಗೆ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಡಗು ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಲೀಲಾವತಿ ಅವರು ಮಾತನಾಡುತ್ತಾ ಜನಜಾಗೃತಿ ವೇದಿಕೆಯ ಉದ್ದೇಶಗಳು, ಮಧ್ಯವರ್ಜನ ಶಿಬಿರಗಳಿಂದ ಆಗುವ ಲಾಭಗಳು ಹಾಗೂ ಹಾಗೂ ಕುಡಿತ ಬಿಟ್ಟ ಒಬ್ಬ ಸದಸ್ಯ ನನ್ನ ಕುಟುಂಬವನ್ನು ಯಾವ ರೀತಿ ಸಾಧಕ ಕುಟುಂಬವನ್ನಾಗಿ ಮಾಡಬಹುದು, ಎಂಬುದನ್ನು ತಿಳಿಸಿದರು.ಅರುಣ್ ಬಾನಗಂಡ ಅವರು ಮಾತಾಡುತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಇನ್ನೂ ಹೆಚ್ಚಿನ ಇಂಥ ಕಾರ್ಯ ಕ್ರಮಗಳನ್ನು ನಡೆಸಬೇಕೆಂದು ತಿಳಿಸಿದರು ಮುಖ್ಯ ಅತಿಥಿಯಾದ ಮುಕಾಟಿರ ಸಂತೋಷ ಅವರು ಮಾತಾಡುತ್ತಾ ಸರ್ಕಾರ ಲಾಟರಿ ಟಿಕೆಟ್ ಅನ್ನು ಯಾವ ರೀತಿ ಬ್ಯಾನ್ ಮಾಡಿತ್ತು ಅದೇ ರೀತಿ ಮಧ್ಯಪಾನವನ್ನು ಕೂಡ ಬ್ಯಾನ್ ಮಾಡಬೇಕು. ಮದ್ಯಪಾನದಿಂದ ಅದೆಷ್ಟು ಕುಟುಂಬಗಳು ಹಾಳಾಗಿವೆ ಎಂಬುದನ್ನು ತಿಳಿಸಿದರು. ಮನೆಯಲ್ಲಿರುವ ಹೆಣ್ಣು ಮಕ್ಕಳು ಮನಸು ಮಾಡಿದರೆ ಮಧ್ಯಪಾನವನ್ನು ಇನ್ನಷ್ಟು ಕಡಿಮೆ ಮಾಡಬಹುದು ಎಂದು ತಿಳಿಸಿದರು…ಕಾರ್ಯ ಕ್ರಮದಲ್ಲಿ ನವಜೀವನ ಸಾಧಕ ಸದಸ್ಯ ರಮೇಶ ಅವರನ್ನು ಅಭಿನಂದಿಸಲಾಯಿತು ಹಾಗೂ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂದಾಣಿ ಯೋಜನೆ ಫಲಾನುಭವಿ ರಾಜೇಶ್ ಅವರಿಗೆ ಕಾರ್ಡ್ ವಿತರಣೆ ಮಾಡಲಾಯಿತು ಹಾಗೂ ಮಳಿಗೆ ಮನೆ ಬಿದ್ದು ಹೋಗಿದ್ದ ತೀರ್ಥವತಿ ಅವರಿಗೆ ಕ್ಷೇತ್ರದಿಂದ ಮಂಜೂರಾದ ಸಹಾಯಧನ ಹಸ್ತಾಂತರಿಸಲಾಯಿತು. ಅಮ್ಮತ್ತಿ ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಯಶೋಧ ತಾಲೂಕು ಜನಜಾಗ್ರತಿ ವೇದಿಕೆ ಸದಸ್ಯರಾದ
ಶ್ರೀ ಪಾಳಯಂಡ ಪಾರ್ಥ ಚಿನ್ನಪ್ಪ ತಾಲೂಕು ಯೋಜನಾಧಿಕಾರಿಯವರಾದ ದಿನೇಶ್ B ಕೃಷಿ ಮೇಲ್ವಿಚಾರಕರು ಹರೀಶ್ ಜ್ಞಾನವಿಕಾಸ ಸಮನ್ವಯದಿಕಾರಿ ಶ್ರೇಯ ವಲಯ ಮೇಲ್ವಿಚಾರಕರಾದ ಸುಜೀರ್ ಸೇವಾ ಪ್ರತಿನಿಧಿಗಳು ತಾಲೂಕಿನ ಶೌರ್ಯ ಘಟಕದ ಸಿಬ್ಬಂದಿಗಳು ನವ ಜೀವನ ಸಮಿತಿಯ ಸದಸ್ಯರು ವಲಯ ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.
