ರಾಯಭಾಗ ತಾಲೂಕು ರಾಯಭಾಗ,ಕಂಕಣವಾಡಿ ವಲಯಗಳ ನವಜೀವನೋತ್ಸವ & ಉಚಿತ ಕಣ್ಣಿನ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರು ಶ್ರೀ ಜಿನೇಂದ್ರ ಖೇಮಲಾಪುರೆ ಸರ್ ರವರು ಉದ್ಘಾಟಿಸಿ, ಮಾತನಾಡಿ ಪೂಜ್ಯರ ಸಮಾಜಕ್ಕೆ ನೀಡುತ್ತಿರುವ ಸೇವೆಯನ್ನು ಸ್ಮರಿಸಿಕೊಂಡರು.ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಶ್ರೀ ದಯಾನಂದ ಕೋರೆ ಮಾತನಾಡಿ ನವಜೀವನ ಎಂದರೆ ಹಿಂದಿನ ಕುಡಿತದ ಕಹಿ ಘಳಿಗೆಗಳನ್ನು ಮರೆತು ಧನಾತ್ಮಕ ಚಿಂತನೆಯೊಂದಿಗೆ ಹೊಸ ಬದುಕನ್ನು ಹೊಸ ಉತ್ಸಾಹದೊಂದಿಗೆ ಬದುಕುವುದೇ ನವಜೀವನ ಎಂದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿಗಳು ಶ್ರೀ ಭಾಸ್ಕರ್ ಏನ್ ರವರು ನವಜೀವನ ಸದಸ್ಯರಿಗೆ ಮಾರ್ಗದರ್ಶನ ನೀಡಿದರು.ಸಭೆಯಲ್ಲಿ ಆದರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಶ್ರೀ ಆದರ್ಶ ವಸವಾಡೆ, ಡಾ :-ಮುಲ್ಲಾ, ಡಾ :-ಯಲ್ಲಪ್ಪ ಬಂತೆ, ಡಾ :-ಶಿಲ್ಪಾ, ಜಿಲ್ಲಾ ಜನಜಾಗೃತಿ ಸದಸ್ಯರು ಶ್ರೀ ಸುರೇಶ ನಾಯ್ಕ್,ದೀಪಕ್ ಪಾಟೀಲ,ತಾಲೂಕಿನ ಯೋಜನಾಧಿಕಾರಿ ಶ್ರೀ ಮಹೇಶ್ವರಪ್ಪ ಜೀ, ನವಜೀವನ ಪೋಷಕಿ ಶ್ರೀಮತಿ ಸುನೀತಾ ಉಪಸ್ಥಿತರಿದ್ದರು, ಜನಜಾಗೃತಿ ಮೇಲ್ವಿಚಾರಕ ಉಮೇಶ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು, ಮೇಲ್ವಿಚಾರಕ ವೆಂಕಟೇಶ್ ಸ್ವಾಗತಿಸಿದರು.
