ರಾಯಚೂರು ತಾಲೂಕಿನ ರಾಯಚೂರು ವಲಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ

Janajagurthi Vedike News

ರಾಯಚೂರು ತಾಲೂಕಿನ ರಾಯಚೂರು ವಲಯದ ಸಿಯಾತಾಲಾಬ್ 31 ವಿಭಾಗದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಾನ್ಯ ಯೋಜನಾಧಿಕಾರಿಗಳು ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಮಾನ್ಯ ಯೋಜನಾಧಿಕಾರಿಗಳಾದ ಶಿವಾಜಿ ಜಿ. ರವರು ಯೋಜನೆಯ ಕಾರ್ಯಕ್ರಮಗಳಾದ ಮಾಶಾಸನ, ಸುಜ್ಞಾನ ಶಿಷ್ಯವೇತನ, ಜ್ಞಾನದೀಪ ಶಿಕ್ಷಕರು, ವಾತ್ಸಲ್ಯ ಮನೆ ನಿರ್ಮಾಣ ಮತ್ತು ನಮ್ಮೂರು ನಮ್ಮ ಕೆರೆ ಹೀಗೆ ಹಲವಾರು ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಾಡುತ್ತಿದ್ದೇವೆ ಎಂದು ಮಾತನಾಡಿದರು ಮತ್ತು ಕಾರ್ಯಕ್ರಮವನ್ನು ಉದ್ದೇಶಿಸಿ ತಂಬಾಕು ಸೇವನೆ ದೇಶದಲ್ಲಿ ಒಂದು ದೊಡ್ಡ ಮಾರಣಾಂತಿಕ ಕಾಯಿಲೆಯಾಗಿದೆ ಇಂದು ಸಣ್ಣ ಸಣ್ಣ ಮಕ್ಕಳು ಮತ್ತು ಹಿರಿಯರು ಕೂಡ ಸೇವನೆ ಮಾಡುತ್ತಿದ್ದು ಇದನ್ನು ನಾವೆಲ್ಲರೂ ಕೂಡ ತಡೆಹಿಡಿಯಬೇಕು. ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಂಡು ಹೋಗಬೇಕು ಎಂದು ಮಾಹಿತಿ ನೀಡಿದರು. ನವೋದಯ ಆಸ್ಪತ್ರೆಯ ಸ್ಥಾನಿಕ ವೈದ್ಯರಾದ ಡಾ. ನಾರಾಯಣ ಪೆಂಡ್ಲಿಕಲ್ ರವರು ತಂಬಾಕು ಸೇವನೆಯಿಂದ ನಮ್ಮ ದೇಶದಲ್ಲಿ ಪ್ರತಿ ವರ್ಷ 6 ಲಕ್ಷ ಜನರು ಮರಣ ಹೊಂದುತ್ತಿದ್ದಾರೆ, ತಂಬಾಕಿನಲ್ಲಿ ನಿಕೋಟಿನ್ ಮತ್ತು ಟಾರ್ ಎಂಬ ರಾಸಾಯನಿಕ ಪದಾರ್ಥ ಇರುತ್ತದೆ. ಆದ್ದರಿಂದ ತಂಬಾಕು ಸೇವನೆಯಿಂದ ನಮ್ಮ ಶರೀರದ ಭಾಗಗಳು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ ಇದರಿಂದಾಗಿ ರಕ್ತ ದೇಹದಲ್ಲೇ ಹೆಪ್ಪುಗಟ್ಟುವುದು,ಸ್ಟ್ರೋಕ್, ಕ್ಯಾನ್ಸರ್ ಎಂಬ ಹಲವಾರು ರೋಗಗಳು ಬರುತ್ತಿದ್ದಾವೆ ಲನ್ಸ್ ಕ್ಯಾನ್ಸರ್, ಹಾರ್ಟ್ ಅಟ್ಯಾಕ್, ಕಣ್ಣಿನ ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್ ಇತ್ಯಾದಿ ರೋಗಗಳು ಬರುತ್ತವೆ. ಆದ್ದರಿಂದ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಂದು ದೊಡ್ಡ ಸಮಾಜ ಸೇವೆಯನ್ನು ಮಾಡುತ್ತಿದ್ದು ಇದರ ಸದುಪಯೋಗ ನೀವೆಲ್ಲ ಪಡೆದುಕೊಂಡು ನಿಮ್ಮ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಜನಜಾಗೃತಿ ವೇದಿಕೆಯ ಸದಸ್ಯರಾದ ತಿಮ್ಮಾ ರೆಡ್ಡಿ ರವರು ಇಂದು ಈ ರೀತಿ ಕಾರ್ಯಕ್ರಮಗಳು ಯಾವುದೇ ಬೇರೆ ಸಂಸ್ಥೆ ಮಾಡುತ್ತಿಲ್ಲ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಜನಸಾಮಾನ್ಯರಿಗೆ ಅರಿವು ಮೂಡಿಸುವಂತಹ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಇವರಿಗೆ ನಾವೆಲ್ಲರೂ ಚಿರಋಣಿಯಾಗಿರಬೇಕು ಎಂದು ನಮಸ್ಕರಿಸುತ್ತ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳು ನಮಗೆಲ್ಲರಿಗೂ ತಿಳಿದ ವಿಚಾರವೇ ಆಗಿದ್ದು ಆದರೂ ಕೂಡ ತಂಬಾಕು ಸೇವನೆಯನ್ನು ಮಾಡುತ್ತಿದ್ದೇವೆ, ದಯವಿಟ್ಟು ಇದನ್ನು ಮಾಡಬೇಡಿ ತಂಬಾಕು ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮಗಳು ಬೀರುತ್ತವೆ ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಈರಣ್ಣ ಬಾಯಿದೊಡ್ಡಿ, ಸ್ಥಳೀಯ ಸೇವಾಪ್ರತಿನಿದಿಗಳಾದ ವಿಜಯಲಕ್ಷ್ಮೀ ಮತ್ತು ಸುಜಾತ, VLE ಸರೋಜಾ ಹಾಗೂ ಸ್ಥಳೀಯ ಸಂಘದ ಸದಸ್ಯರು ಉಪಸ್ಥಿತರಿದ್ದರು.