ರಾಮನಗರ ತಾಲೂಕಿನ ಅಂಚೆ ಪಾಳ್ಯ ವಲಯದ ಸರಕಾರಿ ಪ್ರೌಢ ಶಾಲೆ ಗೊಲ್ಲಹಳ್ಳಿ ಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು sdmc ಅಧ್ಯಕ್ಷರಾದ ಪುಟ್ಟಸ್ವಾಮಿ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ, ಜನಜಾಗೃತಿ ವೇದಿಕೆ ಕಾರ್ಯಕ್ರಮಗಳ ಬಗ್ಗೆ ರಾಮನಗರ ತಾಲೂಕು ಜನಜಾಗೃತಿ ಯೋಜನಾಧಿಕಾರಿಯಾದ ಮಾಧವ ನಾಯಕ್ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬೆಂಗಳೂರು ನಗರದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇವಣ್ಣರವರು ಮಾಹಿತಿ ನೀಡಿದರು. ತಾಲೂಕು ಯೋಜನಾಧಿಕಾರಿಗಳಾದ ಮುರಳೀಧರ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಗೀತಾ, ಒಕ್ಕೂಟ ಅಧ್ಯಕ್ಷರಾದ ಪುಷ್ಪಲತಾ, ವಲಯದ ಮೇಲ್ವಿಚಾರಕರಾದ ನಾಗೇಶ ಸಿ. ಎನ್., ಜ್ಞಾನವಿಕಾಸ ಸಮನ್ವಯಧಿಕಾರಿ ಉಷಾ ಕಲ್ಯಾಣಿ, ಸೇವಾಪ್ರತಿನಿಧಿ ಗಿರಿಜಾ, ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.
