ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ವಲಯದಲ್ಲಿ ನಡೆದ 1620 ನೇ ಮದ್ಯ ವರ್ಜನ ಶಿಬಿರದ ಕುಟುಂಬ ದಿನ ಮತ್ತು ಸಮಾರೋಪ ಸಮಾರಂಭ

Janajagurthi Vedike News

ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ವಲಯದಲ್ಲಿ ನಡೆದ 1620 ನೇ ಮದ್ಯ ವರ್ಜನ ಶಿಬಿರದ ಕುಟುಂಬ ದಿನ ಮತ್ತು ಸಮಾರೋಪ ಸಮಾರಂಭ ಮಾನ್ಯ ಜಿಲ್ಲಾ ನಿರ್ದೇಶಕರಾದ ಜಯಕರ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆಯಿತು ಈ ಕಾರ್ಯಕ್ರಮದ ಉದ್ದೇಶ ಇದರಿಂದ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಆಗುವ ಪ್ರಯೋಜನಗಳನ್ನು ತಿಳಿಸಿದರು ಈ ಕಾರ್ಯಕ್ರಮವನ್ನು ಮದ್ಯ ವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀಯುತ M.B. ಕೃಷ್ಣ ಇವರು ಉದ್ಘಾಟನೆ ಮಾಡಿದರು.ಈ ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಭಾಸ್ಕರ್ ಇವರು ಈ ಕಾರ್ಯಕ್ರಮದ ರೂಪುರೇಷೆ,ಆಚಾರ ವಿಚಾರ, ಸಂಸ್ಕಾರ ಸಂಸ್ಕೃತಿ ಭಜನೆಯ ಮಹತ್ವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು ಹಾರೋಹಳ್ಳಿ ಆರಕ್ಷಕ ಠಾಣೆಯ ಪ್ರಭುಸ್ವಾಮಿ,ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಹಮದ್ ಏಜೇಸ್,ಸಮಾಜ ಸೇವಕರಾದ ಅಪ್ಪು ಗೌಡ,IDBI Bank ಮೇನೇಜರ್ ಶ್ರೀಮತಿ ರಜನಿ,ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರು, ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರು ರಾಮು, ಪವಿತ್ರ, ಶಿಬಿರಾಧಿಕಾರಿ ವಿದ್ಯಾಧರ್, ಆರೋಗ್ಯ ಸಹಾಯಕಿ ರಂಜಿತಾ, ಮೇಲ್ವಿಚಾರಕರು ಕಿರಣ್, ಸಿಬ್ಬಂದಿಗಳು, ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿಗಳು ತಂಡದ ಸದಸ್ಯರು ಮತ್ತು ಊರಿನ ಗಣ್ಯರು 36 ಶಿಬಿರಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು ಮತ್ತು ಈ ಶಿಬಿರದ 7 ದಿನವೂ ಮಾಗಡಿ, ಕೆಂಗಲ್,ರಾಮನಗರ, ಚನ್ನಪಟ್ಟಣ ತಾಲ್ಲೂಕಿನ ನವ ಜೀವನ ಸಮಿತಿ ಸದಸ್ಯರ ಸೇವೆ ಅವೀಸ್ಮರಣೇಯ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತಾ ಭಾವದಿಂದ ಗೌರವಿಸಲಾಯಿತು