ರಾಮನಗರ ಜಿಲ್ಲಾ ಜನಜಾಗೃತಿ ವೇದಿಕೆಯ 2025-26ನೇ ಸಾಲಿನ ಪ್ರಥಮ ಸಭೆಯನ್ನು ರಾಮನಗರ ಜಿಲ್ಲಾ ಕಚೇರಿಯ ಸಭಾಭವನದಲ್ಲಿ ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ರವರು ವಹಿಸಿದ್ದು, ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ಶ್ರೀ ಜಯಂತ್ ಪೂಜಾರಿ ಸರ್ ರವರು, ಜನಜಾಗೃತಿ ವೇದಿಕೆಯ ರಾಮನಗರ ಜಿಲ್ಲೆಯ ಸ್ಥಾಪಕಾಧ್ಯಕ್ಷರಾದ ಶ್ರೀ ಚಿಕ್ಕಯ್ಯರವರು, ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಜಯಕರ ಶೆಟ್ಟಿಯವರು ಹಾಗೂ ಏಳೂ ತಾಲೂಕುಗಳ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಕ್ಷೇತ್ರ ಯೋಜನಾಧಿಕಾರಿಗಳು, ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿಯವರು, ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯವರು ಭಾಗವಹಿಸಿದ್ದು, ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.ಮಾನ್ಯ ಜಿಲ್ಲಾ ನಿರ್ದೇಶಕರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.ರಾಮನಗರ ಜಿಲ್ಲಾ ಜನಜಾಗೃತಿ ವೇದಿಕೆಯ ವತಿಯಿಂದ ಅಧ್ಯಕ್ಷರು ಮಾನ್ಯ ಪ್ರಾದೇಶಿಕ ನಿರ್ದೇಶಕರನ್ನು ಗೌರವಿಸಿದರು. ನಂತರ ಪ್ರಾದೇಶಿಕ ನಿರ್ದೇಶಕರು ಮಾತನಾಡುತ್ತಾ ಪೂಜ್ಯರ ಮಹತ್ವಾಕಾಂಕ್ಷೆಯ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಜನಜಾಗೃತಿ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಸರ್ವ ಪದಾಧಿಕಾರಿಗಳನ್ನು ಅಭಿನಂದಿಸಿದರು. ರಾಮನಗರ ಜಿಲ್ಲೆಯಲ್ಲಿ ತಮ್ಮೆಲ್ಲರ ಸಹಕಾರದಿಂದ ಎಲ್ಲಾ ಜನಜಾಗೃತಿ ಕಾರ್ಯಕ್ರಮಗಳು ಮಾದರಿ ಕಾರ್ಯಕ್ರಮಳಾಗಿ ಮೂಡಿ ಬರಲಿ, ಈ ಮೂಲಕ ಜಿಲ್ಲಾದ್ಯಂತ ದುಶ್ಚಟದ ವಿರುದ್ಧ ಜಾಗೃತಿ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ರವಾನೆಯಾಗಬೇಕೆಂದು ಸಲಹೆ ನೀಡುತ್ತಾ, ಜಿಲ್ಲೆಯಲ್ಲಿ ನಡೆಯುವ ಮದ್ಯವರ್ಜನ ಶಿಬಿರಗಳಿಗೆ ಸ್ಥಳೀಯ ಗುಣಮಟ್ಟದ ಶಿಬಿರಾರ್ಥಿಗಳ ಆಯ್ಕೆ ಬಗ್ಗೆ ಹಾಗೂ ನವ ಜೀವನ ಸದಸ್ಯರ ಅನುಪಾಲನೆ ಬಗ್ಗೆ ಮಾರ್ಗದರ್ಶನ ಮಾಡಿದರು.ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯವರು 2025-26ನೇ ಸಾಲಿನ ಜಿಲ್ಲೆಯ ಕ್ರಿಯಾಯೋಜನೆ ಬಗ್ಗೆ, ವಿವಿಧ ಅನುದಾನಗಳ ಬಗ್ಗೆ ವಿವರಿಸಿದರು.ಈ ಸಭೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳ ಹಾಗೂ ಸಾಮಾಜಿಕ ಅರಣೀಕರಣ ಕಾರ್ಯಕ್ರಮಗಳ ಗುಣಮಟ್ಟದ ಅನುಷ್ಠಾನದ ಬಗ್ಗೆ ಚರ್ಚೆ ವಿಮರ್ಶೆಗಳು ನಡೆದು ಸರ್ವರ ಒಪ್ಪಿಗೆಯಂತೆ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಅಂತಿಮವಾಗಿ ಸಭಾಧ್ಯಕ್ಷರು ಪೂಜ್ಯರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಜಿಲ್ಲಾದ್ಯಂತ ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಮಾತನಾಡಿದರು.ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನಜಾಗೃತಿ ಪದಾಧಿಕಾರಿಗಳನ್ನು ಮಾನ್ಯ ಪ್ರಾದೇಶಿಕ ನಿರ್ದೇಶಕರ ಮಾರ್ಗದರ್ಶನದಲ್ಲಿ ಗೌರವಿಸಲಾಯಿತು.ಹಾರೋಹಳ್ಳಿ ತಾಲೂಕು ಯೋಜನಾಧಿಕಾರಿ ಶ್ರೀಮತಿ ನಾಗವೇಣಿಯವರು ಧನ್ಯವಾದ ನೀಡುವುದರ ಮೂಲಕ ಸಭೆ ಮುಕ್ತಾಯಗೊಂಡಿತು.
