ರಾಮನಗರ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ರಾಮನಗರ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ಚನ್ನಪಟ್ಟಣ ಯೋಜನಾ ಕಚೇರಿಯಲ್ಲಿ ನಡೆಯಿತು ಉದ್ಘಾಟನೆಯನ್ನು ಜಿಲ್ಲಾಧ್ಯಕ್ಷರಾದ ಚಿಕ್ಕಣ್ಣಯ್ಯ ನೆರವೇರಿಸಿ ಸಭೆಯನ್ನು ಕಾರ್ಯ ಸೂಚಿಯಂತೆ ನಡೆಸಿಕೊಟ್ಟರು ಸಭೆಯಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪಿ ಗಂಗಾಧರ ರೈ ಯವರು ಯೋಜನೆಯ ಸಮಗ್ರ ಪರಿಚಯ & ಜನಜಾಗೃತಿಯ ಬೆಳವಣಿಗೆ ಮತ್ತು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು ಸಭೆಯಲ್ಲಿ ಗಾಂಧೀ ಜಯಂತಿ ಆಚರಣೆ , ವಜೀವನ ಸಮಿತಿ ಬಲವರ್ಧನೆ ,ಹಕ್ಕೊತ್ತಾಯ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ವಿಮರ್ಶೆ ನಡೆಯಿತು, ಜಿಲ್ಲಾ ವೇದಿಕೆಗೆ ಹೊಸದಾಗಿ ಐದು ಮಂದಿ ಪದಾಧಿಕಾರಿಗಳ ಸೇರ್ಪಡೆ ನಡೆಯಿತು ಸಭೆಯಲ್ಲಿ ಡಿವೈಎಸ್ಪಿ ರಮೇಶ್ ,ಜಿಲ್ಲಾ ನಿರ್ದೇಶಕರಾದ ಶ್ರೀನಿವಾಸ್, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ,ಜಿಲ್ಲೆಯ ಐದು ಮಂದಿ ಯೋಜನಾಧಿಕಾರಿಗಳು, ಜನಜಾಗೃತಿ ಮತ್ತು ಎಂಐಎಸ್ ಯೋಜನೆ ಅಧಿಕಾರಿಗಳು ಜಿಲ್ಲಾ ಪ್ರಬಂಧಕರು ಉಪಸ್ಥಿತರಿದ್ದರು.