ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ವಲಯದಲ್ಲಿ 1700ನೇ ಮಧ್ಯವರ್ಜನ ಶಿಬಿರವನ್ನು ಶ್ರೀ ಸದಾನಂದ ಸ್ವಾಮಿಗಳು ಶ್ರೀ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಗುರುಮಠ ಸಂಸ್ಥಾನ ತುಮ್ಮಿನಕಟ್ಟಿ ಇವರು ದೀಪಬೆಳಗಿಸುವ ಮೂಲಕ ಶಿಬಿರದ ಉದ್ಘಾಟನೆ ಮಾಡಿರುತ್ತಾರೆ. ಶ್ರೀ ಚಂದ್ರಶೇಖರ ಬಣಕಾರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಶ್ರೀ ಮಂಜುನಾಥ್ ಗೌಡ ಮತ್ತು ಶ್ರೀ ಭಾಸ್ಕರ್. ಏನ್. ಯೋಜನಾಧಿಕಾರಿಗಳು,ಶ್ರೀಮತಿ ಜ್ಯೋತಿ ಗ್ರಾಂ, ಪಂ, ಅಧ್ಯಕ್ಷರು, ಶ್ರೀ ಬಸವರಾಜ್ ಮಾಜಿ ತಾ. ಪಂ. ಅಧ್ಯಕ್ಷರು, ಇವರುಗಳು ಶಿಬಿರಾರ್ಥಿಗಳಿಗೆ ಶುಭಹಾರೈಸಿರುತ್ತಾರೆ. ಶ್ರೀ ನವೀನ್ ಭಾರತ್ ಪೆಟ್ರೋಲ್ ಬಂಕ್ ಮಾಲೀಕರು, ಶ್ರೀ ಬಸವರಾಜ್ ಚಿತ್ತಣ್ಣ ಯುವ ಮುಖಂಡರು, ಶ್ರೀಮತಿ ಭಿ ಭಾರತಿ ಮಾಜಿ ತಾ. ಪಂ. ಸದಸ್ಯರು ಉಪಸ್ಥಿತರಿದ್ದರು.
