ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಪ್ರಯುಕ್ತ ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಶ್ವ ವಿದ್ಯಾಲಯದಲ್ಲಿ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ.ನಿರಂಜನ್ ಕುಮಾರ್, ಶ್ರೀಮತಿ ಪದ್ಮಲತಾ ಅಮ್ಮನವರು, ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೆಗೌಡ ಸರ್, ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ, ಜಿಲ್ಲಾ ನಿರ್ದೇಶಕರಾದ ಶ್ರೀ ಸುರೇಶ್ ಮೊಯಿಲಿ, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಫೀರಾಜ್ ಖಂಡೇಕರ್, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ಶ್ರೀ ಸಂತೋಷ್ ಶೆಟ್ಟಿ, ದೇವೆಂದ್ರಪ್ಪ ಕಾಗೇಣ್ಣನವರು, ವಸಂತ್ ಅರ್ಕಸಾಲಿ, ಗುರುನಾಥ್ ಕೆಂಪಲಿಂಗೇಗೌಡ, ಧಾರವಾಡ ಹಾಗೂ ಹುಬ್ಬಳ್ಳಿ ತಾಲೂಕಿನ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಕರಪತ್ರ ಬಿಡುಗಡೆ ಮಾಡಿ ಸಂದೇಶ ನೀಡಿದ ಡಾ.ನಿರಂಜನ್ ಕುಮಾರ್ ರವರು, ಯುವಜನತೆ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಬೇಕು ಎಂದು ತಿಳಿಸಿದರು. ಮರವಾಗಿ ಬೆಳೆಯಬೇಕಾದವರು ಗಿಡದಲ್ಲೆ ಕುಂಠಿತ ಗೊಂಡರೆ ಅದರ ಫಲ ಸಿಗುವುದಿಲ್ಲ ಹಾಗೆ ಯುವಜನತೆ ದುರಭ್ಯಾಸಕ್ಕೆ ಬಲಿಯಾದರೆ ಸಮಾಜಕ್ಕೆ ನಷ್ಟವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುರೇಶ್ ಮೊಯಿಲಿ ಸ್ವಾಗತಿಸಿ ಯೋಜನಾಧಿಕಾರಿ ಅಶೋಕ್ ಧನ್ಯವಾದ ಮಾಡಿದರು ಕಾರ್ಯಕ್ರಮದ ನಿರೂಪಣೆಯನ್ನು ಹುಬ್ಬಳ್ಳಿ ತಾಲೂಕಿನ ಯೋಜನಾಧಿಕಾರಿಗಳಾದ ಮಂಜುನಾಥ್ ನಾಯ್ಕ್ ನಿರೂಪಿಸಿದರು.
