ಯಾದಗಿರಿಯಲ್ಲಿ 1723ನೇ ಮದ್ಯವರ್ಜನ ಶಿಬಿರ ಉದ್ಘಾಟನೆ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಯಾದಗಿರಿ ತಾಲೂಕು ಯಾದಗಿರಿ ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಯಾದಗಿರಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಯಾದಗಿರಿ, ವಾಸವಿ ಕಲ್ಯಾಣ ಮಂಟಪ ಯಾದಗಿರಿ, ನಗರಸಭೆ ಯಾದಗಿರಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ, ವೈದ್ಯರು ಮತ್ತು ಮೆಡಿಕಲ್ ಅಸೋಸಿಯೇಷನ್ ಯಾದಗಿರಿ, ಆರಕ್ಷಕ ಠಾಣೆ ಯಾದಗಿರಿ, ಸ್ಥಳೀಯ ಸಂಘ ಸಂಸ್ಥೆಗಳು, ಸ್ಥಳೀಯ ಎಲ್ಲ ಇಲಾಖೆಗಳು, ಸಮಸ್ತ ದಾನಿಗಳು ಹಾಗೂ ಸಾರ್ವಜನಿಕರ ಸಹಕಾರ ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ಯಾದಗಿರಿ, ಯಾದಗಿರಿ ಗ್ರಾಮಾಂತರ ಮತ್ತು ಗಾಂಧಿ ಚೌಕ್ ವಲಯ ಇವರುಗಳ ಸಹಕಾರದೊಂದಿಗೆ ಡಾll ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾll ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 1723ನೇ ಮದ್ಯವರ್ಜನ ಶಿಬಿರ ವಾಸವಿ ಕಲ್ಯಾಣ ಮಂಟಪ ಯಾದಗಿರಿಯಲ್ಲಿ ಇಂದು ಉದ್ಘಾಟನೆಗೊಂಡಿತು. ಶ್ರೀ ಕುಮಾರ ಸ್ವಾಮಿಗಳು ವಿಶ್ವಕರ್ಮ ಎಕದಂಡಿಗಿ ಮಠ ಯಾದಗಿರಿ ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ದೀಪವನ್ನು ಪ್ರಜ್ವಲಿಸಿ ಎಲ್ಲರನ್ನು ಆಶೀರ್ವದಿಸಿದರು. ಶ್ರೀ ರಾಜೇಶ್.ಕೆ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಲಬುರ್ಗಿ ಪ್ರಾದೇಶಿಕ ವಿಭಾಗ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಕಮಲಾಕ್ಷ ಇವರು ಮಾತನಾಡಿ ಸಂಸ್ಥೆಯ ಹುಟ್ಟು, ಬೆಳವಣಿಗೆ, ನಡೆದು ಬಂದ ಹಾದಿಯ ಪರಿಚಯದೊಂದಿಗೆ ಶುಭಾಶಯವನ್ನು ಕೋರಿದರು. ವೇದಿಕೆಯಲ್ಲಿ ಸಿದ್ದಪ್ಪ ಹೊಟ್ಟಿ ಜಿಲ್ಲಾಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಯಾದಗಿರಿ, ಶ್ರೀ ನಾಗರಾಜ ಬೀರನೂರ ವಕೀಲರು ಸಮಾಜ ಸೇವಕರು ಹಾಗೂ ಉಪಾಧ್ಯಕ್ಷರು 1723ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀ ಶರಣಪ್ಪ ಮುಖ್ಯೋಪಾಧ್ಯಾಯರು ಸಾರ್ವಜನಿಕ ಪಾಠಶಾಲೆ ಯಾದಗಿರಿ, ಶ್ರೀ ಶಾಂತಪ್ಪ ವಕೀಲರು, ಶ್ರೀ ಅನಿಲ್ ಕುಮಾರ್ ಪತಂಜಲಿ ಯೋಗ ಸಮಿತಿ, ಶ್ರೀ ಪ್ರವೀಣ್ ಕುಮಾರ್ ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರು, ಶ್ರೀಮತಿ ರೇಣುಕ ಒಕ್ಕೂಟದ ಅಧ್ಯಕ್ಷರು, ಶ್ರೀ ಸಂತೋಷ್ ಪಟ್ನೇಕರ್ ಎಂ.ಐ.ಎಸ್ ಯೋಜನಾಧಿಕಾರಿ ಯಾದಗಿರಿ, ಶ್ರೀ ಮಹೇಶ್ವರಪ್ಪ ಮರುಪಾವತಿ ಯೋಜನಾಧಿಕಾರಿ ಯಾದಗಿರಿ, ಶ್ರೀ ಸಂತೋಷ್ ಯೋಜನಾಧಿಕಾರಿ ಸುರಪುರ ತಾಲೂಕು ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಶ್ರೀ ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀಮತಿ ಫಿಲೋಮಿನಾ ಡಿಸೋಜಾ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ಮಲ್ಲೇಶಪ್ಪ ಮೇಲ್ವಿಚಾರಕರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಲಬುರ್ಗಿ ಪ್ರಾದೇಶಿಕ ವಿಭಾಗ ವಿವರಗಳು ಉಪಸ್ಥಿತರಿದ್ದರು. ಮೇಲ್ವಿಚಾರಕರುಗಳಾದ ಶ್ರೀಮತಿ ಕಮಲಾ, ಶ್ರೀ ಬಲಭೀಮ, ಶ್ರೀ ಸಾಮವೇಲ್ ಮತ್ತು ತಾಲೂಕಿನ ಎಲ್ಲಾ ಮೇಲ್ವಿಚಾರಕರುಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಕಛೇರಿ ಸಿಬ್ಬಂದಿಗಳು, ಹಾಗೂ ಸ್ಥಳೀಯ ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಫಲಾನುಭವಿ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮವನ್ನು ಶ್ರೀ ಮಂಜುನಾಥ ಹೆಚ್ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಯಾದಗಿರಿ ತಾಲೂಕು ಇವರು ಸ್ವಾಗತಿಸಿ, ಶ್ರೀ ಶರಣು ಕೃಷಿ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಯಾದಗಿರಿ ತಾಲೂಕು ಇವರು ನಿರೂಪಿಸಿ, ಶ್ರೀ ಬಾರೇಶ್ ನಾಯ್ಕ್ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಹತ್ತಿಕುಣಿ ವಲಯ ಇವರು ವಂದಿಸಿದರು.