ಯಶಸ್ವಿಯಾಗಿ ನಡೆದ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಮಾವೇಶ ಮತ್ತು ಹಾಕ್ಕೋತಾಯ ಮಂಡನೆ

Janajagurthi Vedike News

ಮಂಡ್ಯ: ತಾಲೂಕಿನ ಹೊಸ ಬೂದನೂರಿನ ಲೆಮನ್ ಗ್ರಾಸ್ ಹೋಟೆಲಿನ ಪ್ರಕೃತಿ ಸೌಂದರ್ಯದ ಮಡಿಲಿನ ಸಭಾಂಗಣದಲ್ಲಿ ಮೈಸೂರು ಪ್ರಾದೇಶಿಕ ವ್ಯಾಪ್ತಿಯ 7 ಜಿಲ್ಲೆಗಳನ್ನು ಒಳಗೊಂಡ 6 ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಮಾವೇಶ ಮತ್ತು ಸರಕಾರಕ್ಕೆ ಹಾಕ್ಕೋತಾಯ ಮಂಡನೆ ಕಾರ್ಯಕ್ರಮ ನಡೆಯಿತು. ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ & ಜನಜಾಗೃತಿಯ ಹೊಸ ಕಾರ್ಯಕ್ರಮ ನಗರದ ನಗರಗಳಲ್ಲಿನ ಬಾಡಿಗೆ ವಾಹನ ಚಾಲಕ ಮಾಲಕರಿಗೆ ದುಶ್ಚಟಗಳ ಜಾಗೃತಿ ಅಭಿಯಾನ ಉದ್ಘಾಟಿಸಿದ ಮಂಡ್ಯ ಜಿಲ್ಲೆಯ ಮಾಜಿ ಸಚಿವರು ಮತ್ತು ಸಂಸದರಾದ ಶ್ರೀ ಎನ್ ಚೆಲುವರಾಯಸ್ವಾಮಿ ಅವರು ಜನಜಾಗೃತಿ ವೇದಿಕೆಯ ಕಾರ್ಯ ಚಟುವಟಿಕೆಗಳು ಪ್ರಶಾಂಶನೀಯ ಮತ್ತು ಅಭಿನಂದನೆಗೆ ಅರ್ಹವಾಗಿದೆ. ಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಮಾಜ ಮತ್ತು ಕುಟುಂಬ ಉದ್ಧಾರ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳಾದ ನಾವು ಕೈಜೋಡಿಸಬೇಕು ಎಂದು ಆಶಿಸಿದರು. ಸರ್ಕಾರಕ್ಕೆ ಹಕ್ಕುತಾಯ ಮಂಡನೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿಯವರು ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗೆ ಪೂರಕವಾಗಿ ಕಡಿವಾಣ ಹಾಕಲು ಸರಕಾರಕ್ಕೆ ರಾಜ್ಯ ಜನಜಾಗೃತಿ ವೇದಿಕೆಯ ಪರವಾಗಿ ಶಾಸಕ ಎಂ ಶ್ರೀನಿವಾಸರವರಿಗೆ ವಾಚಿಸಿ ಮಂಡಿಸಿದರು. ಮತ್ತು ಜನಜಾಗೃತಿ ವೇದಿಕೆಯ ಸದಸ್ಯರಾದ ನಾವು ಪೂಜ್ಯ ಧರ್ಮಸ್ಥಳ ಧರ್ಮಾಧಿಕಾರಿಗಳ ಹಲವಾರು ಜನ ಉಪಯೋಗಿ ಕಾರ್ಯಕ್ರಮಗಳಲ್ಲಿ ನಮಗೆ ಸೇವೆ ನೀಡಲು ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳೋಣ, ಸಮಾಜದಲ್ಲಿ ಸಾವಿರಾರು ಮಂದಿ ಮಧ್ಯದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ನಮಗೆ ಸಿಕ್ಕಿದೆ ಸೇವಾ ಮನೋಭಾವದಿಂದ ನಾವು ಸೇವೆ ನೀಡೋಣ ಎಂದು ಅಭಿಪ್ರಾಯಪಟ್ಟರು. ಕಾಲೋನಿಗಳಲ್ಲಿ ದುಶ್ಚಟ ನಿರ್ಮೂಲನೆ ಅಭಿಯಾನದ ಉದ್ಘಾಟನೆ ಮಂಡ್ಯ ಶಾಸಕರಾದ ಶ್ರೀ ಎಂ ಶ್ರೀನಿವಾಸರವರು ಹಾಕ್ಕೊತ್ತಾಯ ಸ್ವೀಕರಿಸಿ, ಸರಕಾರಕ್ಕೆ ಅರ್ಪಿಸಿ ಅನುಷ್ಠಾನಕ್ಕೆ ಪ್ರಯತ್ನಿಸುತ್ತೇನೆ ಎಂದು ವಾಗ್ದಾನ ನೀಡಿ, ಕಾಲೋನಿಗಳಲ್ಲಿ ದುಶ್ಚಟ ದುರಾಭ್ಯಾಸಗಳಿಗೆ ಬಲಿ ಬೀಳದಂತೆ & ನೈರ್ಮಲ್ಯ ಕಾಪಾಡಿಕೊಳ್ಳುವ ನೆಲೆಯಲ್ಲಿ ಕೈಗೊಂಡ ಕಾರ್ಯ ಮಹತ್ವಪೂರ್ಣವಾಗಿದೆವೆಂದರು. ಸಾಧಕ ನವಜೀವನ ಸಮಿತಿಯ ಸದಸ್ಯರಿಗೆ ಅನುದಾನಗಳ ವಿತರಣೆ ವ್ಯಸನ ಮುಕ್ತರಾಗಿ ನವಜೀವನ ಸ್ವಸಹಾಯ ಸಂಘಗಳನ್ನ ರಚಿಸಿ ಆ ಮೂಲಕ ಯೋಜನೆಯಿಂದ ಆರ್ಥಿಕ ಸಹಾಯ ಪಡೆದು ಬದುಕು ಕಟ್ಟಿಕೊಂಡಿರುವ ಎರಡು ಮಂದಿ ನವ ಜೀವನ ಸದಸ್ಯರಿಗೆ ಅನುದಾನಗಳನ್ನು ವಿತರಿಸಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಟ್ರಸ್ಟಿಗಳಾದ ವಿ ರಾಮಸ್ವಾಮಿ ಯವರು ನವಜೀವನ ಸಮಿತಿಯ ಸದಸ್ಯರಿಗೆ ಪ್ರೋತ್ಸಾಹ ನೀಡಿ ಅವರುಗಳನ್ನ ಉದ್ಯಮಿಗಳನ್ನಾಗಿ ರೂಪಿಸುವ ಕೆಲಸ ಜನಜಾಗೃತಿ ವೇದಿಕೆಯಿಂದಾಗುತ್ತಿದೆ ಎಂದರಲ್ಲದೆ ತನ್ನ ಸ್ವಂತ ಅನುಭವದ ವಿಚಾರಧಾರೆಗಳನ್ನು ಉದಾಹರಣೆಯಾಗಿ ನೀಡಿ ಜನಜಾಗೃತಿ ವೇದಿಕೆ ಎಂಬ ಸಮಾಜದ ಉದ್ದಾರಕ್ಕೆ ನಿರ್ಮಿತವಾದ ಸಂಘಟನೆಯಲ್ಲಿ ಸದಸ್ಯರಾಗಿರುವ ನಾವೆಲ್ಲರೂ ಫಲಾಪೇಕ್ಷೆ ಇಲ್ಲದೆ ಸೇವೆ ನೀಡೋಣವೆಂದರು. ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರುಗಳಿಗೆ ಗೌರವ ಸಲ್ಲಿಕೆ. ಪ್ರಸ್ತುತ ವರ್ಷ ಪ್ರಾದೇಶಿಕ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ನಡೆದ 16 ಮಧ್ಯವರ್ಜನ ಶಿಬಿರಗಳ ಅಧ್ಯಕ್ಷರುಗಳನ್ನು ವೇದಿಕೆಗೆ ಆಹ್ವಾನಿಸಿ ಉಪಸ್ಥಿತಿಯಲ್ಲಿ ಶಾಲು ಹಾರ ಹಾಕಿ ಅಭಿನಂದಿಸಿ ಗೌರವಿಸಲಾಯಿತು. ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಕಾರ್ಯಕ್ರಮಗಳ ರೂಪರೇಷೆಗಳ ಮಂಡನೆ ಈ ಕಾರ್ಯಕ್ರಮದ ಕಲ್ಪನೆಯ ರೂವಾರಿ ಪ್ರಾದೇಶಿಕ ನಿರ್ದೇಶಕರಾದ ಬಿ ಜಯರಾಮ ನೆಲ್ಲಿತ್ತಾಯ ರವರು ಜನಜಾಗೃತಿ ಕಾರ್ಯಕ್ರಮ ವಿಕಾಸಗೊಳ್ಳುತ್ತಿರುವ ವೇದಿಕೆಯಾಗಬೇಕು ಈ ನೆಲೆಯಲ್ಲಿ ಕಾಲೋನಿಗಳಲ್ಲಿ ಜಾಗೃತಿ ಕಾರ್ಯಕ್ರಮ, ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ ಜಾಗೃತಿ ಕಾರ್ಯಕ್ರಮ, ಮಧ್ಯವರ್ಜನಿ ಶಿಬಿರಗಳ ಅಧ್ಯಕ್ಷರುಗಳಿಗೆ ಅಭಿನಂದನೆ, ನವಜೀವನ ಸಮಿತಿಯ ಸದಸ್ಯರಿಗೆ ಗೌರವದನ ವಿತರಣೆ, ಮುಂತಾದ ಹೊಸ ಕಾರ್ಯಕ್ರಮಗಳು ವೇದಿಕೆಗಳ ಮೂಲ ನಡೆದು ಅವುಗಳ ಅನುಷ್ಠಾನ ಗಳಿಗೆ ಜನಜಾಗೃತಿ ಪದಾಧಿಕಾರಿಗಳು ಸ್ವತಹ ಕಾಳಜಿ ವಹಿಸಿಕೊಂಡು ಅನುಷ್ಠಾನ ಮಾಡಿದಾಗ ಜಿಲ್ಲಾ ಜನಜಾಗೃತಿ ವೇದಿಕೆಗಳಿಗೆ ಗೌರವ ಪ್ರಾಪ್ತಿಯಾಗುತ್ತದೆ. ಮುಂದಿನ ದಿನದಲ್ಲಿ ತಮ್ಮ ಕಾರ್ಯ ನಿರ್ವಹಿಸಿದ 2 ಜಿಲ್ಲಾ ವೇದಿಕೆಗಳನ್ನು ಗೌರವಿಸಲಾಗುವುದು ಎಂದರು. ಜನಜಾಗೃತಿ ಕಾರ್ಯಕ್ರಮದ ಅನುಷ್ಠಾನದ ಮಾಹಿತಿ. ಜನಜಾಗೃತಿ ಕಾರ್ಯಕ್ರಮದ ಪ್ರಾದೇಶಿಕ ನಿರ್ದೇಶಕರು ರಾಜ್ಯ ಕಾರ್ಯದರ್ಶಿಗಳಾದ ವಿವೇಕ್ ವಿನ್ಸೆಂಟ್ ಪಾಯಸ್ ರವರು. ವರ್ಷಕ್ಕೆ 7.5 ಕೋಟಿ ರೂಪಾಯಿಗಳನ್ನು ಜನ ಜಾಗೃತಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಪೂಜ್ಯರು ಮತ್ತು ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೀಸಲಿಟ್ಟಿದ್ದಾರೆ. ಮಧ್ಯ ಮತ್ತು ಮಾದಕ ವಸ್ತುಗಳ ಬಳೆಗೆ ಬಿದ್ದವರನ್ನು ಮೇಲೆತ್ತುವ ಕೆಲಸ ಜನಜಾಗೃತಿ ವೇದಿಕೆ ಮಾಡುತ್ತಿದೆ. ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ವೇದಿಕೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ಪಾನ ನಿಷೇಧ ಅಸಾಧ್ಯ ಮನಃಪರಿವರ್ತನೆ ಕೆಲಸ ಸಾಧ್ಯ , ಧರ್ಮಸ್ಥಳದಲ್ಲಿ ನಿರ್ಮಿತವಾದ ಮಧ್ಯ ಮುಕ್ತ ಕೇಂದ್ರಕ್ಕೆ ವ್ಯಸನಿಗಳನ್ನು ಕಳಿಸುವ ಕೆಲಸವಾಗಬೇಕು ವೆಂದರಲ್ಲದೆ.. ಆಗಮಿಸಿದ ಜನಜಾಗೃತಿ ಪದಾಧಿಕಾರಿಗಳ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟರು. ಅಧ್ಯಕ್ಷತೆ ಮಂಡ್ಯ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಹನುಮಂತಯ್ಯರವರು ವಹಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನ ಸ್ಮರಿಸಿಕೊಂಡು ಜನಜಾಗೃತಿ ವೇದಿಕೆಯನ್ನು ಗಟ್ಟಿಗೊಳಿಸಿ ಬೆಳೆಸೋಣವೆಂದರು.
ವೇದಿಕೆಯಲ್ಲಿ ಕ್ರಮವಾಗಿ ಹಾಸನ, ಮೈಸೂರು ಚಾಮರಾಜನಗರ, ಚನ್ನರಾಯಪಟ್ಟಣ, ರಾಮನಗರ ಜಿಲ್ಲಾಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಸೋಮಶೇಖರ್ ,ರವಿಶಂಕರ್ ಜಯರಾಮ್, ಚಿಕ್ಕಣ್ಣಯ್ಯರಿದ್ದರು. ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮಂಡ್ಯ ಜಿಲ್ಲಾ ನಿರ್ದೇಶಕಿ ಶ್ರೀಮತಿ ಚೇತನ, ನಿರ್ದೇಶಕರಗಳಾದ ಮಹಾಬಲ ಕುಲಾಲ್, ಮುರಳಿದರ ಹೆಚ್ ಎಲ್, ಮಮತಾ ಹರೀಶ್ ರಾವ್, ಜಯ ಕರ ಶೆಟ್ಟಿ, ಶ್ರೀಮತಿ ಲತಾ ಬಂಗೇರ ಉಪಸ್ಥಿತರಿದ್ದರು.