ಯರಗಟ್ಟಿ ತಾಲೂಕಿನ ಕಟಕೋಳ ವಲಯದ ಅಡ್ಡಣಗಿ ಸಭಾಭವನದಲ್ಲಿ 1843 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಬೆಳಗಾವಿ 2 ಜಿಲ್ಲೆಯ ಯರಗಟ್ಟಿ ತಾಲೂಕಿನ ಕಟಕೋಳ ವಲಯದ ಅಡ್ಡಣಗಿ ಸಭಾಭವನದಲ್ಲಿ 1843 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಟಿ. ಪಿ. ಮನೋಳಿ ರವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಮದ್ಯಪಾನದಿಂದ ಜಾಗೃತರಾಗಿ, ವ್ಯಸನಮುಕ್ತ ಜೀವನ ನಡೆಸುವಂತೆ ಶುಭ ಹಾರೈಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಬೆಳಗಾವಿ 2 ಜಿಲ್ಲೆಯ ನಿರ್ದೇಶಕರಾದ ಶ್ರೀ ಹೆಚ್. ಆರ್. ಲವಕುಮಾರ್ ಶಿಬಿರದ ಮಹತ್ವದ ಬಗ್ಗೆ ತಿಳಿಸಿದರು. ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ಬಾಸ್ಕರ್ ರವರು ಶಿಬಿರದ ರೂಪುರೇಷೆಗಳ ಬಗ್ಗೆ ತಿಳಿಸಿದರು. ದಿವ್ಯಸಾನಿಧ್ಯ ವಹಿಸಿದ ಶ್ರೀ ಮ. ನಿ. ಪ್ರ. ಸ್ವ ಸಚ್ಚಿದಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಎಸ್. ಎಸ್. ಡವಣ, ಶ್ರೀ ಬಾಳನ ಗೌಡ್ ಹೊಸಮನಿ, ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಶ್ರೀ ಸುಭಾಶ ಹನಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ ಮಂಜುನಾಥ ಪಾಟೋಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಬಿ. ಎ. ದೇಸಾಯಿ, ಶ್ರೀ ಮಹದೇವ್ ಅತ್ತಾರ್, ಶ್ರೀ ಶಿವ ಬಸಪ್ಪಾ ಅಡ್ಡಣಗಿ, ಶ್ರೀ ಈರಣ್ಣ ಗೌಡ ಪಾಟೀಲ, ಯೋಜನಾಧಿಕಾರಿಗಳಾದ ಶ್ರೀ ಸತೀಶ್ ಡಿ., ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಶ್ರೀ ಸುರೇಶ ಹತ್ತಿ, ಶ್ರೀ ಸಿದ್ದಪ್ಪ ಉಪಸ್ಥಿತರಿದ್ದರು.