ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಶಂಕನಪುರ ವಲಯದ ಬೆಳತ್ತೂರು ಗ್ರಾಮದ ಮದ್ಯವರ್ಜನ ಶಿಬಿರದ ಮೂಲಕ ದುಶ್ಚಟಮುಕ್ತರಾಗಿರುವ ಸದಸ್ಯರುಗಳ ನವಜೀವನೋತ್ಸವ ಮತ್ತು ಮಂಜುನಾಥ ಸ್ವಾಮಿಗೆ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮವು ನಡೆಯಿತು. ಗೌರವಾನ್ವಿತ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ಪಾಯಸ್ ರವರು ನವಜೀವನ ಸಮಿತಿಯ ಸದಸ್ಯರುಗಳಿಗೆ ಪ್ರೇರೇಪಣಾ ಮಾತುಗಳೊಂದಿಗೆ, ಮದ್ಯವರ್ಜನ ಶಿಬಿರಗಳಿಂದಾದ ಒಳಿತು, ನವಜೀವನ ಸಮಿತಿ ಸದಸ್ಯರ ಜವಾಬ್ದಾರಿ, ಹಕ್ಕು ಮತ್ತು ಕರ್ತವ್ಯ ವಿಚಾರಧಾರೆಗಳನ್ನು ವಿವರಿಸುತ್ತಾ ಶುಭ ಹಾರೈಸಿದರು ಹಾಗೂ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಚೇತನಾ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಮಂಜಮ್ಮ.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ, ಗ್ರಾಮ ಪಂಚಾಯತ್ ಸದಸ್ಯರಾದ ನಳಿನಾ ಕುಮಾರಿ, ಮಂಡ್ಯ ಜಿಲ್ಲಾಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ನಿಂಗೇ ಗೌಡ, ಜನಜಾಗೃತಿ ಯೋಜನಾಧಿಕಾರಿಗಳಾದ ಮಾಧವ ನಾಯಕ್, ಶಿಬಿರಧಿಕಾರಿ ದಿನೇಶ್ ಮರಾಠಿ, ಆರೋಗ್ಯ ಸಹಾಯಕಿ ಶ್ರೀಮತಿ ಪ್ರೆಸ್ಸಿಲ್ಲ ಜನಜಾಗೃತಿಯ ಮೇಲ್ವಿಚಾರಕರಾದ ವಸಂತ್, ಮೇಲ್ವಿಚಾರಕಿ ಸುಮಾ, ನವಜೀವನ ಸಮಿತಿಯ ಪೋಷಕರಾದ ಮಮತಾ, ಸುಧಾ ಹಾಗೂ ನವಜೀವನ ಸಮಿತಿಯ ಸದಸ್ಯರು ಮತ್ತು ಅವರ ಕುಟುಂಬದವರು ಸೇರಿ ಭಾಗವಹಿಸಿದ್ದರು.