ಮೈಸೂರು ನವಜೀವನೋತ್ಸವ ಮತ್ತು ಪ್ರಮಾಣ ಪತ್ರ ವಿತರಣೆ

Janajagurthi Vedike News

ಮೈಸೂರು ಪ್ರಾದೇಶಿಕ ಕಚೇರಿ ಸಮುಚ್ಚಯದ ಸಭಾಭವನದಲ್ಲಿ ಮೈಸೂರು ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಜೀವನ ನಡೆಸುತ್ತಿರುವ ನವ ಜೀವನ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾದೇಶಿಕ ನಿರ್ದೇಶಕರಾದ ಬಿ ಜಯರಾಮ ನೆಲ್ಲಿತ್ತಾಯ ರವರು ಉದ್ಘಾಟಿಸಿ.. ನವಜೀವನವೆಂಬುದು ದೇವರು ಕೊಟ್ಟ ವರಪ್ರಸಾದ ಇದನ್ನು ಇದನ್ನು ನಮ್ಮ ನವ ಜೀವನ ಸದಸ್ಯರು ಅರಿತು ಕೊಂಡು ಜೀವನ ಪರಿಯಂತ ವ್ಯಸನ ಮುಕ್ತ ಜೀವನವನ್ನು ನಡೆಸಿದಾಗ ಪೂಜ್ಯರು ಕಂಡ ಕನಸು ನನಸಾಗಲು ಸಾಧ್ಯ ಎಂದರಲ್ಲದೆ ಬದುಕಿಗೆ ಪೂರಕವಾದ ನಿದರ್ಶನಗಳನ್ನು ಒಳಗೊಂಡ ಮಾರ್ಗದರ್ಶನ ನೀಡಿದರು. ಭಾವುಕರಾದ ನವಜೀವನ ಸದಸ್ಯರು ಅನಿಸಿಕೆಯನ್ನು ವ್ಯಕ್ತಪಡಿಸಿ ಕುಡಿತದ ಜೀವನ ಮತ್ತು ಪ್ರಸ್ತುತ ನಡೆಸುತ್ತಿರುವ ಜೀವನವನ್ನು , ಮಾಡಿದ ಸಾಧನೆ, ಸಿಗುತ್ತಿರುವ ಗೌರವ ನೆನೆದು ಈ ಜೀವನ ಬರಲು ಶ್ರಮವಹಿಸಿ ದುಡಿದ ಯೋಜನೆಯ ಕಾರ್ಯಕರ್ತರು & ಸಮಿತಿಯ ಪದಾಧಿಕಾರಿಗಳ ಸೇವೆಯನ್ನು ನೆನೆದು ಕೃತಜ್ಞತಾಪೂರ್ವಕವಾದ ಧನ್ಯವಾದಗಳು ನೀಡಿ, ಶಿಬಿರದ ಕಾರ್ಯಕ್ರಮವನ್ನು ದಯಪಾಲಿಸಿದ ಯೋಜನೆ, ಜನಜಾಗೃತಿ ವೇದಿಕೆಗೆ ಮತ್ತು ಪೂಜ್ಯ ದಂಪತಿಗಳಿಗೆ ಚಿರಋಣಿಗಳೆಂದರು.ಪ್ರಮಾಣ ಪತ್ರ ವಿತರಣೆ ಮತ್ತು ಅಭಿನಂದನೆ ಶಿಬಿರದ ಸಂದರ್ಭದಲ್ಲಿ ಪ್ರಮಾಣ ನೋಂದಾಯಿಸಿ…. ಈ ದಿನ ಅದನ್ನು ವಿತರಿಸುವುದರ ಜೊತೆಗೆ ಶಾಲು ಹಾಕಿ ಗುಲಾಬಿ ಹೂ ನೀಡಿ ನವಜೀವನ ಸದಸ್ಯರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಜನಜಾಗೃತಿ ವೇದಿಕೆಯ ಸದಸ್ಯರುಗಳಾದ ಶಿವಣ್ಣ ಚಂದಗಾಲು, ನಳಿನಾಕ್ಷಿ, ಅಪ್ಪಾಜಿ, ಗಾಯತ್ರಿ, ಶ್ರೀಮತಿ ಕಮಲ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಕೃಷ್ಣ, ಕೆ ಆರ್ ನಗರ ಜಿಲ್ಲೆಯ ನಿರ್ದೇಶಕರಾದ ಶ್ರೀ ಮುರಳಿದರ ಹೆಚ್ ಎಲ್, ಯೋಜನಾಧಿಕಾರಿಗಳಾದ, ಶ್ರೀಮತಿ ನಂದಿನಿ ಶೆಟ್, ಗಣಪತಿ ಭಟ್, ಭಾಸ್ಕರ್, ಉಪಸ್ಥಿತರಿದ್ದರು.ಸ್ವಉದ್ಯೋಗ ನಿರತರಿಗೆ ಪ್ರಮಾಣ ಪತ್ರ ವಿತರಣೆ ಈ ಸಂದರ್ಭ ಯೋಜನೆಯ ತರಬೇತಿಯ ಸಹಕಾರ ದೊಂದಿಗೆ ಸ್ವಉದ್ಯೋಗ ಮಾಡುತ್ತಿರುವವರನ್ನು ಪ್ರಮಾಣ ಪತ್ರ ನೀಡಿ ಪ್ರೇರಣೆಯ ಪ್ರೋತ್ಸಾಹ ನೀಡಲಾಯಿತು. ಯಶಸ್ವಿಕೆ ಪೂರಕರಾದವರು ಶಿಬಿರ ನಡೆಸಿದ ವಲಯದ ಮೇಲ್ವಿಚಾರಕರು, ನವಜೀವನ ಸದಸ್ಯರು ಮತ್ತು ಅವರ ಮನೆಯವರು, ನವಜೀವನದ ಪೋಷಕರು ಉಪಸ್ಥಿತರಿದ್ದರು.