ಮೈಸೂರು ಜಿಲ್ಲಾ ಮಟ್ಟದ ಪಾನಮುಕ್ತರ ಸಮಾವೇಶ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಕಳಸ್ತವಾಡಿಯ ಸಂಕಲ್ಪ ಸೌಧ ಸಮುಚ್ಚಯದ ಸಭಾಂಗಣ ದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಕಾರ್ಯಕ್ರಮ ನಡೆಯಿತು . ಉದ್ಘಾಟನೆಯನ್ನು ಚಾಮರಾಜ ಕ್ಷೇತ್ರ ಮೈಸೂರಿನ ಶಾಸಕರಾದ ಮಾನ್ಯ ಎಲ್ ನಾಗೇಂದ್ರರವರು ಉದ್ಘಾಟಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ಕಾರ್ಯಕ್ರಮ ಶ್ಲಾಘನೀಯ ಎಂದು ಬಣ್ಣಿಸಿ ಪಾನಮುಕ್ತ ಸಹೋದರರಿಗೆ ಅಭಿನಂದನೆಗಳು ಎಂದರು. ಕಾರ್ಯಕ್ರಮದಲ್ಲಿ ನರಸಿಂಹ ರಾಜ ಕ್ಷೇತ್ರ ಮೈಸೂರಿನ ಶಾಸಕರಾದ ತನ್ವೀರ್ ಸೇಠ್ ರವರು ದುಶ್ಚಟಗಳು ವ್ಯಕ್ತಿಯ ಬದುಕಿನಲ್ಲಿ ಆವರಿಸಿಕೊಂಡರೆ ವ್ಯಕ್ತಿ ಬದುಕಿದ್ದರು ಸತ್ತ ಹಾಗೆಯೇ ಹಾಗಾಗಿ ಪಾನಮುಕ್ತ ಸಹೋದರರ ಜೀವನ ಹಸನಾಗಲಿ ಎಂದು ಶುಭ ಹಾರೈಸಿದರು ನವಜೀವನ ಸಮಿತಿಯ ಸದಸ್ಯರನ್ನು ಅಭಿನಂದಿಸಿ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷರಾದ ಚೇತನ್ ಆರ್ ರವರು ಧರ್ಮಸ್ಥಳ ಪೂಜ್ಯ ಹೆಗ್ಗಡೆಯವರ ಸಮಾಜಮುಖಿ ಚಿಂತನೆ ಹಾಗೂ ಅದಕ್ಕೆ ಪೂರಕವಾಗಿರುವ ಕಾರ್ಯಕ್ರಮಗಳು ನಿಜವಾಗಿಯೂ ಅಭಿನಂದನಾರ್ಹ ಯೋಜನೆಯ ಹತ್ತು ಹಲವು ಕಾರ್ಯಕ್ರಮಗಳಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಮದ್ಯವರ್ಜನ ಶಿಬಿರ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತದೆ ಎಂದು ಬಣ್ಣಿಸಿದರು ಈ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಬಿ ಜಯರಾಮ ನೆಲ್ಲಿತ್ತಾಯ ರವರು ಈ ಯೋಜನೆ, ಜನಜಾಗೃತಿ ,ಪೂಜ್ಯರ ಉದ್ದೇಶಗಳನ್ನು ತಿಳಿಯಪಡಿಸಿ ಮನುಷ್ಯನ ಬುದ್ಧಿಯ ಬಡತನ ದೂರ ಮಾಡಲು ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು ಕಾರಣವಾಗಿದೆ ಎಂದರು ,ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಹಂದನಹಳ್ಳಿ ಸೋಮಶೇಖರ್ ರವರು ಪಾನಮುಕ್ತ ಸಹೋದರರ ಬದುಕು ಹಸನಾಗುವುದರ ಜೊತೆಗೆ ಸಾಧಕರಾಗಿ ರುವುದು ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು ಯಶಸ್ವಿಯಾಗಿರುವುದಕ್ಕೆ ಸಾಕ್ಷಿ ಎಂದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂಶಿ ಪ್ರಸನ್ನ ಕುಮಾರ್ ರವರು ಕಾರ್ಯನಿರ್ವಾಹಕ ಸಂಪಾದಕರು ಕನ್ನಡಪ್ರಭ ಪತ್ರಿಕೆ ಮೈಸೂರು ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಕಲ ಕಾರ್ಯ ಕ್ರಮಗಳು ಯಶಸ್ಸು ರೀತಿಯಲ್ಲಿ ನಡೆಯುತ್ತವೆ ಪಾನಮುಕ್ತ ಸಹೋದರರ ಜೀವನ ಸುಖಕರವಾಗಿ ಸಾಗಲಿ ಎಂದು ಹಾರೈಸಿದರು .
