ಮೂಡಿಗೆರೆ : 22 ವರ್ಷದ ಯುವಕ ಕೊರೋನಾ ಎಂಬ ಮಹಾಮಾರಿಗೆ ಬಲಿಯಾದ ವಿಚಾರ ತಿಳಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ತಂಡದ ಸದಸ್ಯರು ಅವರ ಹುಟ್ಟೂರು ಆದ ಗೌತಹಳ್ಳಿಗೆ ತೆರಳಿ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.ಈ ಸಂದರ್ಭದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಪ್ರವೀಣ್ ಪೂಜಾರಿ, ಸದಸ್ಯರಾದ ಅರುಣ್ ಪಿಂಟೋ ರವಿಪೂಜಾರಿ ಮಂಜುನಾಥ್ ಪಟ್ಟಣ ಪಂಚಾಯಿತಿ ಸುರೇಶ್ ಶಿವಗಿರಿ ಸೇವಕರು ತಂಡದ ಸದಸ್ಯರಾದ ಶಶಿ ಕೆಲ್ಲೂರು ತಾರನಾಥ್ ಸಚಿನ್ ಇನ್ನು ಮುಂತಾದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.
