ಮೂಡಿಗೆರೆ: ಅರಣ್ಯ ದಲ್ಲಿ ಪ್ರಾಣಿಗಳಿಗೆ 2800 ಹಣ್ಣು ಹಂಪಲು ಗಿಡ ನಾಟಿ.

Janajagurthi Vedike News

ಮೂಡಿಗೆರೆ, ಜೂನ್ 16; ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಮೂಡಿಗೆರೆ ತಾಲೂಕು ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಪರಿಸರ ಕಾರ್ಯಕ್ರಮದಡಿಯಲ್ಲಿ ಬಣಕಲ್ ವಲಯದ ಮತ್ತಿಕಟ್ಟೆ ಎಂಬ ಅರಣ್ಯ ಪ್ರದೇಶದಲ್ಲಿ ಸುಮಾರು 2800 ಹಣ್ಣು ಹಂಪಲ ಗಿಡಗಳು ನಾಟಿ ಮಾಡಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಉಪ ವಿಭಾಗಾಧಿಕಾರಿಗಳಾದ ಶ್ರೀ ಎಚ್.ಎಲ್ ನಾಗರಾಜ್ ಅವರು ಗಿಡ ನಾಟಿಗೆ ಚಾಲನೆ ನೀಡಿದರು.ಮೂಡಿಗೆರೆ ತಾಲೂಕಿನ ತಹಶೀಲ್ದಾರರಾದ ಶ್ರೀ ರಮೇಶ್, ವಲಯ ಅರಣ್ಯಾಧಿಕಾರಿಗಳಾದ ಬಿ.ಜಿ ಮೋಹನ್ ಕುಮಾರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯಸ್, ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರಕಾಶ್ ರಾವ್ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ವಿಠ್ಠಲ್ ಪೂಜಾರಿ, ಜನ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯಕ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ, ಉಪ ವಲಯ ಅರಣ್ಯಾಧಿಕಾರಿಗಳಾದ ಉಮೇಶ್, ಬಸವರಾಜ್ ಉಪಸ್ಥಿತರಿದ್ದರು.ತಾಲೂಕಿನ 123 ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಗಿಡ ನಾಟಿ ಶ್ರಮದಾನ ಮಾಡಿದರು. ಅರಣ್ಯ ದಲ್ಲಿ ಹಣ್ಣು ಹಂಪಲು ಗಿಡ ನಾಟಿ ಕಾರ್ಯಕ್ರಮದ ಅನ್ವಯ ಒಟ್ಟು 2800 ಗಿಡಗಳನ್ನು ನಾಟಿ ಮಾಡಲಾಯಿತು.