ಮುಳಬಾಗಿಲು ಯೋಜನಾ ಕಛೇರಿ ವ್ಯಾಪ್ತಿಯ ಮುಳಬಾಗಿಲು ಕಾರ್ಯಕ್ಷೇತ್ರದಲ್ಲಿ 1717ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಮಾನ್ಯ ಜನಜಾಗೃತಿ ಯೋಜನಾಧಿಕಾರಿಯವರಾದ ಶ್ರೀ ತಿಮ್ಮಯ್ಯನಾಯ್ಕ ಸರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಯಕ್ರಮದಲ್ಲಿ ಆಸೀನರಾಗಿದ್ದ ಅತಿಥಿ ಮಹೋದಯರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿಶ್ರೀ ಪದ್ಮಯ್ಯ.ಸಿ.ಹೆಚ್ (ಮಾನ್ಯ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಕೋಲಾರ ) ಶ್ರೀ ಗರಡಿ ಶಂಕರ್ (ನಗರ ಸಭೆ ಸದಸ್ಯರು ಮುಳಬಾಗಿಲು), ಶ್ರೀ ಮಂಡಿಕಲ್ ಮಂಜುನಾಥ್ (ಸಮಾಜ ಸೇವಕರು ಮುಳಬಾಗಿಲು ),ಶ್ರೀಮತಿ ರೂಪ ಶ್ರೀನಿವಾಸ್ (ಮಾಜಿ ಪುರಸಭಾ ಸದಸ್ಯರು),ಶ್ರೀ ಸೋಮಶೇಖರ್.ಕೆ (ಗ್ರಾ.ಪಂ ಸದಸ್ಯರು ಕದರೀಪುರ)
ಶ್ರೀ ಹರೀಶ್ ಕುಮಾರ್ ವಿ.ಆರ್.ಕೆ (ಮುತ್ಯಾಲಪೇಟೆ ಮುಳಬಾಗಿಲು) ಶ್ರೀಮತಿ ರೆಡ್ಡಮ್ಮ (ಓಂ ಶಕ್ತಿ ಮಂಡಳಿ ಮುಳಬಾಗಿಲು) ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಆರ್.ಆರ್.ರಾಜೇಂದ್ರಗೌಡ (ಅಧ್ಯಕ್ಷರು, 1717ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಮಾಲೂರು)ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಳಬಾಗಿಲು ತಾಲೂಕು ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ಹರೀಶ್ ಕುಮಾರ್ ಸಿ. ಶಿಬಿರಾಧಿಕಾರಿಯವರಾದ ಶ್ರೀ ದಿವಾಕರ್ ಪೂಜಾರಿ, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ದರ್ಶನ್.ಎಂ.ಎಸ್ ಹಾಗೂ ನವಜೀವನ ಸಮಿತಿ ಸದಸ್ಯರು,ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು/ಪದಾಧಿಕಾರಿಗಳು,ಪ್ರಗತಿಬಂಧು/ಸ್ವಸಹಾಯ ಸಂಘದ ಸದಸ್ಯರು, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು ,ಮುಳಬಾಗಿಲು ತಾಲ್ಲೂಕಿನ ಎಲ್ಲಾ ಮೇಲ್ವಿಚಾರಕರು ಜ್ಞಾನವಿಕಾಸ ಸಮನ್ವಯಾಧಿಕಾರಿ, ತಾಲೂಕಿನ ಸೇವಾಪ್ರತಿನಿಧಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
