ಮಾಲೂರು ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮಾಲೂರು ತಾಲ್ಲೂಕಿನ ಧರ್ಮ ರಾಯ ಕಲ್ಯಾಣ ಮಂಟಪದಲ್ಲಿ ಗಾಂಧಿ ಜಯಂತಿ ಹಾಗೂ ಜನ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಎಂ.ಕೆ ವಾಸುದೇವ ದೀಪ ಬೆಳಗುವುದರ ಮುಖಾಂತರ ಉದ್ಘಾಟನೆ ಮಾಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ದುಶ್ಟಟಗಳ ದಾಸರಾಗುವ ಪುರುಷರಿಗೆ ಸರಿಯಾದ ತಿಳಿವಳಿಕೆ ಹೇಳುವ ಮೂಲಕ ಅವರನ್ನು ಸರಿದಾರಿಗೆ ತರುವ ಕಾರ್ಯದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು. ಕುಡಿತ ಬಿಡಿಸಲು ಮಕ್ಕಳಿಗೆ ತಾಯಂದಿರು, ಪತಿಗೆ ಪತ್ನಿ, ಅಣ್ಣ ತಮ್ಮಂದಿರಿಗೆ ಅವರ ಅಕ್ಕ ತಂಗಿಯರು ಸರಿಯಾದ ಮಾರ್ಗದರ್ಶನ ಮಾಡಿದರೆ ಕುಡಿತದ ಚಟ ಬಿಡಲು ಸಾಧ್ಯವಿದೆ. ಕೌಟಿಂಬಿಕ ಪರಿಸ್ಥಿತಿ ಸಾಮಾಜಿಕವಾಗಿ ಕುಡಿತದಿಂದ ಎದುರಿಸುವ ಅವಮಾನಗಳನ್ನು ಅವರಿಗೆ ಮನವರಿಕೆ ಮಾಡಿದಲ್ಲಿ ಅವರು ದುಶ್ಚಟಗಳ ದಾಸರಾಗದೇ ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಬದುಕು ನಡೆಸುತ್ತಾರೆ ಎಂದರು. ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸತೀಶ್ ಎಚ್ ಮಾತನಾಡಿ ಕುಡಿತ ಮಾಡುವ ವ್ಯಕ್ತಿ ಸಮಾಜಕ್ಕೆ ಬೇಡವಾಗಿರುತ್ತಾನೆ. ಅದರೆ ಸಮಾಜದಲ್ಲಿ ಕುಡಿತದಿಂದ ಕಟ್ಟಕಡೆಯಲ್ಲಿ ಇರುವ ವ್ಯಕ್ತಿಯನ್ನು ಪರಿವರ್ತನೆ ಮಾಡುವ ಕೆಲಸ ಪೂಜ್ಯ ಡಿ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುವಂತೆ ಮಾಡುತ್ತಿದೆ. ಗಾಂಧೀಜಿಯವರ ಆಶಯದಂತೆ ಮಧ್ಯಮುಕ್ತ ಹಳ್ಳಿಗಳನ್ನಾಗಿ ಮಾಡಲು ಧರ್ಮಸ್ಥಳ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷರಾದ ಪುರಸಭೆ ಸದ್ಯಸರಾದ ಪರಮೇಶ್ ಮಾತಾಡಿ ಹಲವು ರೀತಿಯಲ್ಲಿ ಗ್ರಾಮೀಣ ಭಾಗದ ಜನರ ಏಳಿಗೆ ಶ್ರಮಿಸುತ್ತಾ ಬಂದಿದ್ದೆ. ಜನರಿಗೆ ವಿವಿಧ ಕೊಡುಗೆ ನೀಡಿತ್ತಾ ಒಂದು ಉತ್ತಮ ಸಂಘ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು. ಈ ಸಂದರ್ಭದಲ್ಲಿ 1709ನೇ ಮಧ್ಯವರ್ಜನ ಶಿಬಿರ ಅಧ್ಯಕ್ಷರಾದ ವಿ. ಕೃಷ್ಣಪ್ಪ, ಪುರಸಭೆ ಸದಸ್ಯರಾದ, ಎಂ. ವಿ. ವೇಮನ, ಭಾರತಿ ಶಂಕರಪ್ಪ, ಇಮ್ತಿಯಾಜ್, ನೀಲಾದ್ರಿ ಪೇಸ್ಟ್ ಕಂಟ್ರೋಲ್ ಸರ್ವಿಸ್ ಮಾಲೀಕರಾದ ರವಿಕುಮಾರ ವಿ.ಎನ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಉಮೇಶ, ನಾಮಿನಿ ಪುರಸಭೆ ಸದಸ್ಯರಾದ ವೆಂಕಟೇಶ್, ಮೇಲ್ವಿಚರಕರಾದ ರಮೇಶ್ ಕಾರ್ಯಕ್ರಮ ನಡೆಸಿದರು ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಕೃಷಿ ಅಧಿಕಾರಿಯಾದ ಮಧುರಾಜ್ ಮಾಡಿದರು ಮತ್ತು ಉಷಾರಾಣಿ, ನೇತ್ರಾವತಿ, ಕವಿತಾ, ದರ್ಶನ್ ಮಂಜುನಾಥ್, ಆದಿನಾರಾಯಣ, ಮಮತ, ತಾಲೂಕಿನ ಎಲ್ಲಾ ಸೇವಾ ಪ್ರತಿನಿಧಿಗಳು ಸಂಘದ ಸದಸ್ಯರು ಭಾಗವಹಿಸಿದರು.
