ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಹಾರೂಗೇರಿ ತಾಲೂಕು

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಅಥಣಿ ಜಿಲ್ಲಾ ಯೋಜನಾ ವ್ಯಾಪ್ತಿಯ ಹಾರೂಗೇರಿ ತಾಲೂಕಿನ ಕುಡುಚಿಯ ಶ್ರೀ ಅನುಭವ ಕಲ್ಯಾಣ ಮಂಟಪದಲ್ಲಿ 1640ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ಇಂದು ನಡೆಸಲಾಯಿತು. ಸಮರೂಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಪ.ಪೂ. ಶ್ರೀ ಸದ್ಗುರು ಡಾ. ಅಭಿವನ ಬ್ರಹ್ಮಾನಂದ ಮಹಾಸ್ವಾಮಿಗಳು ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ಪರಮನಂದವಾಡಿ ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಥಣಿ ಜಿಲ್ಲಾ ಯೋಜನಾ ವ್ಯಾಪ್ತಿಯ ಜಿಲ್ಲಾ ನಿರ್ದೇಶಕಿಯಾದ ಶ್ರೀಮತಿ ನಾಗರತ್ನ ಹೆಗಡೆ, ಅಧ್ಯಕ್ಷರಾದ ಶ್ರೀ ಈಶ್ವರ್ ಗಿಣಿಮುಗೆ, ಜನಜಾಗ್ರತಿ ವೇದಿಕೆಯ ಪದಾಧಿಕಾರಿಯಾದ ಶ್ರೀ ಯಲ್ಲಪ್ಪ ಶಿಂಗೆ, ಗಣ್ಯರಾದ ಶ್ರೀ ಮಹೇಶ್ ತಮ್ಮಣ್ಣ, ಶ್ರೀ ಶಿವಾನಂದ ಲಕ್ಕನಗಾವ, ಶ್ರೀ ಲಕ್ಷ್ಮಣ್ ಚೌವರಿ ಶಿಕ್ಷಕರು, ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಕಿರಣ್ ಎಸ್ ಹಾಗೂ ಜನಜಾಗೃತಿ ಯೋಜನಾಧಿಕಾರಿ ಶ್ರೀ ನಾಗೇಶ್ ವೈ ಎ ಉಪಸ್ಥಿತರಿದ್ದರು. ಮಧ್ಯವರ್ಜನ ಶಿಬಿರವು ಅಚ್ಚುಕಟ್ಟಾಗಿ ನಡೆದಿದ್ದು, ಶಿಬಿರದ ಕಾರ್ಯದರ್ಶಿಯಾಗಿ ಉಮೇಶ್ ಮೇಲ್ವಿಚಾರಕರು ಕುಡಚಿ ವಲಯ, ಶಿಬಿರದ ಶಿಬಿರಾಧಿಕಾರಿ ಶ್ರೀ ದಿನೇಶ್ ಮರಾಠಿ, ಆರೋಗ್ಯ ಸಹಾಯಕಿ ಶ್ರೀಮತಿ ಜಯಲಕ್ಷ್ಮಿ, ಉಮೇಶ್ ಹಡಗಲಿ ಜನಜಾಗೃತಿ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಮತ್ತು ನವಜೀವನ ಸಮಿತಿಯ ಸದಸ್ಯರು ಕರ್ತವ್ಯ ನಿರ್ವಹಣೆ ಮಾಡಿರುತ್ತಾರೆ. ಸದ್ರಿ ಶಿಬಿರದ ಸಂಘಟನೆಯಿಂದ ಹಾರೂಗೇರಿ ಭಾಗದ 53 ಜನ ವ್ಯಸನಿಗಳಿಗೆ ವ್ಯಸನ ಮುಕ್ತರಾಗಲು ಚಿಕಿತ್ಸೆ ನೀಡಲಾಯಿತು.