ಧಾರವಾಡ ಪ್ರಾದೇಶಿಕ ವಿಭಾಗದ ಅಥಣಿ ಜಿಲ್ಲಾ ಯೋಜನಾ ವ್ಯಾಪ್ತಿಯ ಹಾರೋಗೇರಿ ತಾಲೂಕಿನ ಕುಡುಚಿಯ ಶ್ರೀ ಅನುಭವ ಮಂಟಪದಲ್ಲಿ 1640ನೇ ಮಧ್ಯವದನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಇಂದು ನೆರೆವೇರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಅಧ್ಯಕ್ಷರಾದ ಶ್ರೀ ಈಶ್ವರ ಗಿಲಿಮುಗೆ, ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ, ಜನಜಾಗೃತಿ ಪದಾಧಿಕಾರಿಗಳಾದ ಶ್ರೀ ಯಲ್ಲಪ್ಪ ಶಿಂಗೆ, ಶ್ರೀ ಶಿವಾನಂದ, ಜನಜಾಗೃತಿ ಯೋಜನಾಧಿಕಾರಿ ಶ್ರೀ ನಾಗೇಶ್, ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಕಿರಣ್,ಹಾಗೂ ಗಣ್ಯರು ಉಪಸ್ಥಿತರಿದ್ದರು .
