ಪರಮಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ 1839 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮಧುಗಿರಿ ಗ್ರಾಮಾಂತರ ತಾಲೂಕು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಮಧುಗಿರಿ ಗ್ರಾಮಾಂತರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ತುಮಕೂರು-2 ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ 1839 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಶ್ರೀ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪ ಬಡುವನಹಳ್ಳಿಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಶ್ರೀ ದಿವಾಕರ್ ಪೂಜಾರಿ ಜನಜಾಗೃತಿ ವೇದಿಕೆಯ ಹುಟ್ಟು, ಬೆಳವಣಿಗೆ, ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸುವ ಮೂಲಕ 1839 ನೇ ಶಿಬಿರದ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಶ್ರೀಮತಿ ಭಾನುಪ್ರಿಯ ನಾಗರಾಜ್ ಅಧ್ಯಕ್ಷರು ಗ್ರಾ.ಪಂ ಬಡವನಹಳ್ಳಿ ಹಾಗೂ ವೇದಿಕೆಯಲ್ಲಿ ಹಾಜರಿದ್ದ ಗಣ್ಯಮಾನ್ಯರುಗಳು ದೀಪ ಪ್ರಜ್ವಲಿಸುವ ಮೂಲಕ 1839 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ತುಮಕೂರು-2 ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ್ ಡಿ. ರವರು ಜನಜಾಗೃತಿ ವೇದಿಕೆಯಿಂದ ನಡೆಸಿಕೊಡುವ ಕಾರ್ಯಕ್ರಮಗಳ ಕುರಿತು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾರ್ವಜನಿಕರ ಅನುಕೂಲಕ್ಕೆ ಹಾಗೂ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಮುಖ್ಯ ಅತಿಥಿಗಳ ನುಡಿಗಳನ್ನು ನುಡಿದರು. ಶ್ರೀ ಎಸ್. ಆರ್. ಕಾಂತರೆಡ್ಡಿ ವೃತ್ತನಿರೀಕ್ಷಕರು ಆರಕ್ಷಕ ಠಾಣೆ ಬಡವನಹಳ್ಳಿ, ಶ್ರೀ ರಾಜಣ್ಣ ಮಾಲೀಕರು ಶ್ರೀರಂಗ ಪೆಟ್ರೋಲ್ ಬಂಕ್, ಶ್ರೀ ಚಂದ್ರಪ್ಪ ನಾಟಿ ವೖದ್ಯರು, ಶ್ರೀ ನಾಗೇಶ್ ಅಧ್ಯಕ್ಷರು ಗ್ರಾ.ಪಂ ರಂಗಾಪುರ, ಶ್ರೀ ತಿಮ್ಮರಾಜು ಅಧ್ಯಕ್ಷರು ಗ್ರಾ.ಪಂ ಸಜ್ಜೆಹೊಸಹಳ್ಳಿ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಸಂಜೀವ ಗೌಡ, ಶ್ರೀ ಲಿಂಗಾರೆಡ್ಡಿ ಎ. ಎಂ. ರವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಕೆ ನುಡಿಗಳನ್ನು ನುಡಿದರು. 1839 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಮಾಜಿ ಜಿ.ಪಂ ಸದಸ್ಯರಾದ ಶ್ರೀ ಚೌಡಪ್ಪ ರವರು ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು.
