ಧಾರವಾಡ ಪ್ರಾದೇಶಿಕ ವಿಭಾಗದ ರಾಯಬಾಗ್ ತಾಲೂಕಿನ ಶ್ರೀ ಜಗಜೀವನ್ ರಾವ್ ಸಭಾಭವನದಲ್ಲಿ 1629ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ಇಂದು ನಡೆಸಲಾಯಿತು. ಸಮಾರೋಪ ಸಮಾರಂಭದಲ್ಲಿ ಹಿರಿಯ ನ್ಯಾಯಾಧೀಶರಾದ ಶ್ರೀ ಬಸವರಾಜಪ್ಪ ಕೆ. ಎಮ್, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಶ್ರೀಪಾಲ್ ಮನವಳ್ಳಿ, ಶ್ರೀ ಕೃಷ್ಣ.ಟಿ ನಿರ್ದೇಶಕರು, ಶ್ರೀ ಮಹಾದೇವ್ ರಾ. ಲಕ್ಕ ಚಟ್ಟೆ ಸೀನಿಯರ್ ಮ್ಯಾನೇಜರ್ ಯೂನಿಯನ್ ಬ್ಯಾಂಕ್ ರಾಯಬಾಗ್, ಶ್ರೀ ಜಯದೀಪ್ ದೇಸಾಯಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ, ಶ್ರೀ ವಸಂತ ಹೊಸಮನಿ, ಶ್ರೀ ಗಿರೀಶ್ ಜನಜಾಗೃತಿ ಸದಸ್ಯರು, ಶ್ರೀ ಸಂತೋಷ್ ರೈ, ಶ್ರೀಮತಿ ಸುರೇಖಾ ಪಾಟೀಲ್ ಉಪಸ್ಥಿರಿದ್ದರು. ಮಧ್ಯವರ್ಜನ ಶಿಬಿರದಲ್ಲಿ 52 ಮಂದಿ ಶಿಬಿರಾರ್ಥಿಗಳು ವ್ಯಸನ ಬಿಟ್ಟು ಬದುಕುವ ಪಣತೊಟ್ಟರು.
