ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ನವ ಜೀವನ ಸಮಿತಿ ಸದಸ್ಯರಿಗೆ ಹೈನುಗಾರಿಕಾ ತರಬೇತಿ ಕಾರ್ಯಾಗಾರ

Janajagurthi Vedike News

ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ನವಜೀವನ ಸಮಿತಿ ಸದಸ್ಯರಿಗೆ ರುಡ್ ಸೆಟ್ ಅರಿಶಿನಕುಂಟೆ ನೆಲಮಂಗಲದಲ್ಲಿ ಹಮ್ಮಿಕೊಂಡ ಹೈನುಗಾರಿಕಾ ತರಬೇತಿ ಕಾರ್ಯಗಾರಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ Dr. LH ಮಂಜುನಾಥ್ ಸರ್ ಅವರು ಆಗಮಿಸಿ ಅತ್ಯುತ್ತಮವಾದ ಹಾಗೂ ಪ್ರೇರಣಾತ್ಮಕ ವಾದ ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ಈ ಸಂದರ್ಭ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ವಿ. ರಾಮ ಸ್ವಾಮಿಯವರು, ಜನಜಾಗೃತಿ ಪ್ರಾದೇಶಿಕ ಕಚೇರಿ ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ಸರ್ ರವರು, ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ M ಸರ್ ರವರು, ಹಿರಿಯ ಉಪನ್ಯಾಸಕರಾದ ಉದಯ್ ಕುಮಾರ್ ರವರು, ಹಾಗೂ ಡಾ. ಜಲೀಲ್ ರವರು ಉಪಸ್ಥಿತರಿದ್ದರು.