ಮಂಡ್ಯ ಜಿಲ್ಲೆಯ ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ ಹಾಗೂ ನವ ಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮವನ್ನು ಪಿ.ಇ.ಎಸ್. ಕಾಲೇಜು, ಸ್ವಾಮಿ ವಿವೇಕಾನಂದ ರಂಗಮಂದಿರ ಮಂಡ್ಯದಲ್ಲಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಪಿ. ರವಿಕುಮಾರ್ ರವರು ಉದ್ಘಾಟಿಸಿ ಶುಭ ಹಾರೈಸಿದರು.

Janajagurthi Vedike Uncategorized

ಮಂಡ್ಯ ಜಿಲ್ಲೆಯ ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ ಹಾಗೂ ನವ ಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮವನ್ನು ಪಿ.ಇ.ಎಸ್. ಕಾಲೇಜು, ಸ್ವಾಮಿ ವಿವೇಕಾನಂದ ರಂಗಮಂದಿರ ಮಂಡ್ಯದಲ್ಲಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಪಿ. ರವಿಕುಮಾರ್ ರವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಡಾ!! ನಿಶ್ಚಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ಮಾಡಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಹನುಮಂತಯ್ಯ ಕೊಣನೂರುರವರು ವಹಿಸಿದ್ದು, ಮಂಡ್ಯ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿಯವರು, ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಚೇತನಾರವರು ಹಾಗೂ ಜನಜಾಗೃತಿ ವೇದಿಕೆಯ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಸಭಾ ವೇಧಿಕೆಯಲ್ಲಿದ್ದ ಪೂಜ್ಯ ಸ್ವಾಮೀಜಿಯವರು ಹಾಗೂ ಎಲ್ಲಾ ಗಣ್ಯರು ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗಾಂಧಿ ಸ್ಮೃತಿ ನೆರವೇರಿಸಿದರು. ಈ ವೇದಿಕೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಠರಾವ್ ಮಂಡನೆಯನ್ನು ಮಾಡಲಾಯಿತು.
ಇಬ್ಬರು ನವಜೀವನ ಸದಸ್ಯರು ತಮ್ಮ ಪಾನಮುಕ್ತ ಜೀವನದ ಅನುಭವಗಳನ್ನು ಹಂಚಿಕೊಂಡರು.ಜಿಲ್ಲೆಯ ಆಯ್ದ ಐದು ಮಂದಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ನವಜೀವನ ಸಮಿತಿ ಸದಸ್ಯರನ್ನು ಪೂಜ್ಯ ಸ್ವಾಮೀಜಿಯವರು ಗಣ್ಯರು ಗುಲಾಬಿ ಹೂ ನೀಡುವುದರ ಮೂಲಕ ಪಾನಮುಕ್ತ ಜೀವನಕ್ಕೆ ಅಭಿನಂದಿಸಿದರು.