ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿಜಿಸ್ಟರ್ಡ್ ಧರ್ಮಸ್ಥಳ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಇವರ ಸಹಯೋಗದೊಂದಿಗೆ ಮಂಡ್ಯದ ರೈತ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.ಜಾಥಾ ಕಾರ್ಯಕ್ರಮವನ್ನು ಮಂಡ್ಯ ತಾಲೂಕಿನ ಜನಪ್ರಿಯ ಶಾಸಕರಾದ ಎಂ ಶ್ರೀನಿವಾಸ್ ರವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆಗೈದು ಪಾರಿವಾಳಗಳನ್ನು ಹಾರಿ ಸಿ ಉದ್ಘಾಟಿಸಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು ಸಭಾಕಾರ್ಯಕ್ರಮವನ್ನು ಮಾನ್ಯ ಮಾಜಿ ಸಚಿವರು ಎಂ.ಎಸ್ ಆತ್ಮಾನಂದ ಅವರು ಉದ್ಘಾಟಿಸಿ ಧರ್ಮಸ್ಥಳ ಸಂಸ್ಥೆಯು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಸೇವೆಯನ್ನು ಸಲ್ಲಿಸುತ್ತಿರುವುದು ತುಂಬಾ ಸಂತೋಷದ ವಿಷಯ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಮ್ಮ ಜಿಲ್ಲೆಯಲ್ಲಿ ಅನುಷ್ಠಾನವಾಗಲಿ ಎಂದು ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ಬಿ.ಜಯರಾಮ ನೆಲ್ಲಿತ್ತಾಯ ರವರು ಮಂಡ್ಯ ಜಿಲ್ಲೆಯು ಕೃಷಿ ಸಾಹಿತ್ಯ ಕಲೆ ರಾಜಕೀಯ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದೆ ಕರ್ನಾಟಕ ರಾಜ್ಯದಲ್ಲಿ ಮಾದರಿ ಜಿಲ್ಲೆ ಎಂದರೆ ಮಂಡ್ಯ ಜಿಲ್ಲೆ ಎಂದರು ಹಾಗೂ ಮದ್ಯಪಾನ ಮುಕ್ತರಾಗಿ ನವಜೀವನ ನಡೆಸುತ್ತಿರುವ ಸದಸ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿದರು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಪಿ ಲಿಂಗೇಗೌಡ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ವಹಿಸಿ ಜನ ಜಾಗೃತಿ ಕಾರ್ಯಕ್ರಮದಲ್ಲಿ ಸೇವೆ ನೀಡಲು ಅವಕಾಶ ಕಲ್ಪಿಸಿದ ಯೋಜನೆಗೆ ಮತ್ತು ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು .ಡಾ. ಸಿದ್ದರಾಮಯ್ಯ ನಿವೃತ್ತ ವಾಣಿಜ್ಯ ತೆರಿಗೆ ಆಯುಕ್ತರು ಗಾಂಧೀಜಿ ಹಾಗೂ ಪೂಜ್ಯ ಹೆಗ್ಗಡೆಯವರ ಆದರ್ಶ ತತ್ವಗಳನ್ನು ಸ್ಮರಿಸಿಕೊಂಡು ಬಣ್ಣಿಸಿದರು, ಜಿಲ್ಲಾ ಪತ್ರಕರ್ತರ ಸಂಘ ಮಂಡ್ಯ ಅಧ್ಯಕ್ಷ ಶ್ರೀ ಮಂಜುನಾಥ್ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳು ಜನರಿಗೆ ಪೂರಕವಾಗಿದೆ ಎಂದರು ಮುಂದಿನ 2ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡ ಹನುಮಂತಯ್ಯ ರವರು ಮತ್ತು ಪದಾಧಿಕಾರಿಗಳು ಗಣ್ಯರು ಮತ್ತು ಪ್ರಾದೇಶಿಕ ನಿರ್ದೇಶಕರ ಉಪಸ್ಥಿತಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದರು, ಜಿಲ್ಲಾ ಜನಜಾಗೃತಿ ವೇದಿಕೆ ಮಂಡ್ಯ ಸದಸ್ಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು .ಜಿಲ್ಲಾ ನಿರ್ದೇಶಕಿ ಶ್ರೀಮತಿ ಚೇತನ ಕಾರ್ಯಕ್ರಮದ ರೂಪುರೇಷೆ ಗಳಿಗೆ ಪೂರಕವಾಗಿ ಸಂಘಟನೆ ಮಾಡಿ ವೇದಿಕೆಯ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ ನಿರ್ವಹಿಸಿದರು . ಮಂಡ್ಯ2 ಜಿಲ್ಲೆಯ ನಿರ್ದೇಶಕರಾದ ಮುರಳಿಧರ್ ರವರು ಜಾಥಾ ಕಾರ್ಯಕ್ರಮ ಮತ್ತು ಸಭೆಯ ನಿರ್ವಹಣೆಯಲ್ಲಿ ಸಹಕರಿಸಿದರು ಜಿಲ್ಲೆಯ ಹೊಸಹಳ್ಳಿ ನಾಗಮಂಗಲ ಮದ್ದೂರು ಭಾರತಿನಗರ ಮಳವಳ್ಳಿ ಶ್ರೀರಂಗಪಟ್ಟಣ ಪಾಂಡವಪುರ ಮೇಲುಕೋಟೆ ತಾಲ್ಲೂಕುಗಳ ಯೋಜನಾಧಿಕಾರಿಗಳು , ಜಿಲ್ಲೆಯ mis ಯೋಜನಾಧಿಕಾರಿ ,ಪ್ರಾದೇಶಿಕ ಕಚೇರಿಯ ಜನಜಾಗೃತಿ ಕಾರ್ಯಕ್ರಮಗಳ ಮತ್ತು ಆಡಳಿತ &ಕೃಷಿ ಯಂತ್ರಧಾರಾ ವಿಭಾಗದ ಯೋಜನಾಧಿಕಾರಿಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ,ನವಜೀವನ ಸಮಿತಿಯ ಪೋಷಕರು , ನವಜೀವನ ಸಮಿತಿಯ ಸದಸ್ಯರು ,ಸಂಘದ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.
