ಉಡುಪಿ ಪ್ರಾದೇಶಿಕ ವಿಭಾಗದ ಮಂಜೇಶ್ವರ ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಉಳ್ಳಾಳ್ತಿ ದೇವಸ್ಥಾನ ಇಡಿಯಡ್ಕದಲ್ಲಿ 1801 ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ರವರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೃಷ್ಣರಾಜ ಮುಖ್ಯ ಅರ್ಚಕರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನೆರವೇರಿಸಿದರು. ಶ್ರೀ ಗಣೇಶ್ ಆಚಾರ್ಯ ಜನಜಾಗೃತಿ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳು ಪ್ರಾಸ್ತಾವಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಗೋಪಾಲ ಶೆಟ್ಟಿ ಅರಿಬೈಲ್ ಸ್ಥಾಪಕ ಅಧ್ಯಕ್ಷರು ಜನಜಾಗೃತಿ ವೇದಿಕೆ ಕಾಸರಗೋಡು, ಶ್ರೀಮತಿ ಶಶಿಕಲಾ ಸುವರ್ಣ ಯೋಜನಾಧಿಕಾರಿಗಳು,
ಶ್ರೀ ಶಂಕರ್ ನಾರಾಯಣ ಖಂಡಿಗೆ, ಶ್ರೀ ಉದಯಕುಮಾರ್ ಆನೆಬಾಗಿಲು,ಶ್ರೀಮತಿ ಕೆ ಇಂದಿರಾ, ಶ್ರೀ ಶ್ರೀಧರ ಮಣಿಯಾಣಿ ವಲಯ್ಯಾಧ್ಯಕ್ಷರು, ಶ್ರೀ ಬಿ. ಪಿ. ಶೇಣಿ ವಲಯ್ಯಾಧ್ಯಕ್ಷರು ಜನಜಾಗೃತಿ ವೇದಿಕೆ ಪೆರ್ಲ, ಶ್ರೀ ಶ್ರೀಧರ್ ನಾಯಕ್, ಶ್ರೀ ಸುರೇಂದ್ರ ನಾಯಕ್ ಮಾಸ್ಟರ್ ಶೌರ್ಯ ವಿಪತ್ತು ನಿರ್ವಹಣೆ, ಶ್ರೀಯುತ ದೇವಿ ಪ್ರಸಾದ್ ಸುವರ್ಣ ಶಿಬಿರಾಧಿಕಾರಿ, ಶ್ರೀಮತಿ ನೇತ್ರಾವತಿ ಆರೋಗ್ಯ ಕಾರ್ಯಕರ್ತರು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
