ಮಂಜುನಾಥನಿಗೆ ಕೊಟ್ಟ ಮಾತನ್ನು ಉಳಿಸಿದರೆ ಬದುಕು ಬಂಗಾರ

Janajagurthi Vedike News

ಶ್ರೀರಂಗಪಟ್ಟಣ ಮಂಜುನಾಥನಿಗೆ ಕೊಟ್ಟ ಮಾತನ್ನು ಉಳಿಸಿದರೆ ಬದುಕು ಬಂಗಾರ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಮಹಿಳೆ ಮತ್ತು ಜನರ ಶ್ರೇಯೋಭಿವೃದ್ಧಿಗೆ ಎಂದು ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳು ಚಂದ್ರವನದ ಶ್ರೀಗಳು 1499ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ನುಡಿದರು. ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪಿ ಗಂಗಾಧರ ರೈ ಸರ್ ಅವರು ಮನುಷ್ಯನ ಬುದ್ಧಿಯ ಮತ್ತು ದುಡ್ಡಿನ ಬಡತನಕ್ಕೆ ಪೂರಕವಾಗಿ ಪೂಜ್ಯರು ಹಾಕಿಕೊಂಡ ರುಡ್ ಸೆಟ್, ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳೇ ಸಾಕ್ಷಿ ಎಂದು ಮಾರ್ಗ ದರ್ಶನದ ವೇಳೆ ನುಡಿದರು . ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ನಿಂಗಣ್ಣ, ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಶಿವಣ್ಣ ಚಂದಗಾಲು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷೆ ಶ್ರೀಮತಿ ನಳಿನಿ ಸತ್ಯನಾರಾಯಣ, ನಿರ್ದೇಶಕರಾದ ಮುರಳೀಧರ ಎಚ್ ಎಲ್, ಯೋಜನಾಧಿಕಾರಿಗಳಾದ ಶ್ರೀಮತಿ ಸಾವಿತ್ರಿ ,ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಶಿಬಿರಾಧಿಕಾರಿ ದಿನೇಶ್ ಮರಾಠಿ, ಆರೋಗ್ಯ ಸಹಾಯಕಿ ಶ್ರೀಮತಿ ಜಯಲಕ್ಷ್ಮಿ ಇತರರಿದ್ದರು. ಸಮಾರೋಪ ಕಾರ್ಯಕ್ರಮಕ್ಕೆ ಮುಂಚೆ ಕುಟುಂಬ ದಿನದ ಕಾರ್ಯಕ್ರಮವನ್ನು ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ಎನ್. ನಡೆಸಿಕೊಟ್ಟರು.