ಬೇಲೂರಿನಲ್ಲಿ ಯಶಸ್ವಿಯಾಗಿ ನಡೆದ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ ತಾಲೂಕಿನವ ಜೀವನ ಸಮಿತಿಯ ಸದಸ್ಯರನ್ನು ಸಂಘಟಿಸಿ ಕಾರ್ಯಕ್ರಮ ನಡೆಸಲಾಯಿತು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಶಾಸಕರಾದ ಲಿಂಗೇಶ್ ರವರು ಪೂಜ್ಯರ ಮತ್ತು ಯೋಜನೆಯ ವತಿಯಿಂದ ನಡೆದ ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನ ಮುಕ್ತರಾದ ಸದಸ್ಯರನ್ನ ಅಭಿನಂದಿಸುತ್ತೇನೆ, ನಾನು ಬಸವಣ್ಣರವರ ಅನುಯಾಯಿ ಆ ನೆಲೆಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ನಾನು ಹೆಂಡದ ರುಚಿ ನೋಡಿಲ್ಲ ಹೆಂಡ ಹಂಚಲ್ಲ ಎಂದು ತಿಳಿಸಿ ಸಾಧಕ ನವ ಜೀವನ ಸಮಿತಿಯ ಸದಸ್ಯರನ್ನು ಅಭಿನಂದಿಸಿ, ಅನುದಾನಗಳನ್ನು ವಿತರಿಸಿ ಶುಭ ಹಾರೈಸಿದರು.ಶಾಸಕರಾದ ಲಿಂಗೇಶ್ ರವರಿಂದ ಅಭಿಮಾನದ ನುಡಿ