ಧಾರವಾಡ ಪ್ರಾದೇಶಿಕ ವಿಭಾಗದ ಬೆಳಗಾವಿ 3 ಯೋಜನಾ ವ್ಯಾಪ್ತಿಯಲ್ಲಿ ನಡೆದ 1820 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ರವರು ಶಿಬಿರಾರ್ಥಿಗಳನ್ನೂದ್ದೇಶಿಸಿ ಶುಭ ಹಾರೈಕೆ ನುಡಿಗಳನ್ನಾಡಿದರು. ನಂತರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಯುತ ರಾಜಣ್ಣ ಕೊರವಿ ಯವರು ಶಿಬಿರಾರ್ಥಿಗಳನ್ನೂದ್ದೇಶಿಸಿ ಶುಭ ಹಾರೈಕೆ ನುಡಿಗಳನ್ನಾಡಿದರು.
