ಬೆಳಗಾಂ 2 ಜಿಲ್ಲಾ ವ್ಯಾಪ್ತಿಯ ಸೌದತ್ತಿ ತಾಲೂಕಿನ ಮುನವಳ್ಳಿಯ ಶ್ರೀ ಕುಮಾರೇಶ್ವರ ಶ್ರೀ ಕುಮಾರೇಶ್ವರ ಆಲೂರು ಮಠ ಸಿಂದಗಿ ಸಮುದಾಯ ಭವನದಲ್ಲಿ ಕಳೆದ ಎಂಟು ದಿನಗಳಿಂದ ನಡೆದ ಮ.ಶಿಬಿರದ ಸಮಾರೋಪ ಸಮಾರಂಭ

Janajagurthi Vedike News

ಸಮಾರೋಪದಲ್ಲಿ ಶ್ರೀ. ಶೋ. ಬ್ರ. ನಿ. ಮುಕ್ತಾಾನಂದ ಮಹಾಸ್ವಾಮಿಗಳು ನಿತ್ಯಾನಂದ ಸತ್ಸಂಗ ಆಶ್ರಮ ಸಿಂದಗಿ ಯವರು ಆಗಮಿಸಿ ಆಶೀರ್ವಚನಗಳನ್ನು ನೀಡಿ ಇಲ್ಲಿ ವ್ಯಸನಿಗಳು ತಯಾರಾಗಿರುವುದು ಧರ್ಮಸ್ಥಳದವರಿಂದ ಅಲ್ಲ ನಮ್ಮವರಿಂದಾಗಿ ತಯಾರಾದವರನ್ನು ಧರ್ಮಸ್ಥಳದವರು ಬಿಡಿಸುವ ಉತ್ತಮ ಕೆಲಸವನ್ನು ಮಾಡಿ ಪೂಜ್ಯರ ಆಶಯಗಳನ್ನು ಈಡೇರಿಸಿದ್ದಾರೆ ಎಂದು ಬಣ್ಣಿಸಿದರು. ವೇದಮೂರ್ತಿ ಮಡಿವಾಳಯ್ಯ ಬಸಯ್ಯ ಹಿರೇಮಠ ರವರು ಸಮಾಜಕ್ಕೆ ಪೂರಕವಾದ ಕಾರ್ಯಕ್ರಮದ ಯಶಸ್ಸಿನಲ್ಲಿ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಎಂದರು. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರಾದ ರಾಜಣ್ಣ ಮೂ ಕೊರವಿಯವರು ಸಮಾಜದಲ್ಲಿ ಎಲ್ಲರೂ ಸುಖ-ಶಾಂತಿ ನೆಮ್ಮದಿಯಿಂದ ಇರಬೇಕು ಎಂಬ ಆಶಯದಿಂದ ಧರ್ಮಸ್ಥಳದ ಪೂಜ್ಯ ಹೆಗ್ಗೆಡೆ ಯವರು ಈ ಕಾರ್ಯಕ್ರಮಗಳನ್ನು 40 ವರ್ಷಗಳಿಂದ ಮಾಡಿ ಅದೆಷ್ಟೋ ಮಂದಿಯ ಬದುಕನ್ನು ಬದಲಾಯಿಸಿದ್ದಾರೆ ಎಂದು ತಿಳಿಸಿದರಲ್ಲದೆ ಯೋಜನೆಯ ಹಲವಾರು ಕಾರ್ಯಕ್ರಮಗಳನ್ನು ವಿವರಿಸಿದರು. ಸೌದತ್ತಿಯ ರಾಜಕೀಯ ಮುಖಂಡರಾದ ವಿರೂಪಾಕ್ಷಪ್ಪ ಕ ಮಾಮನಿಯವರು ಉತ್ತಮ ಕಾರ್ಯಕ್ರಮಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯವೆಂದರು. ಜಿಲ್ಲಾ ನಿರ್ದೇಶಕರಾದ ಲವಕುಮಾರ್ರವರು ಕಾರ್ಯಕ್ರಮದ ಉದ್ದೇಶ ಮತ್ತು ಪೂಜ್ಯರ ಆಶಯಗಳನ್ನು ತಿಳಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸುಭಾಷ್ ಹನ್ಸಿಯವರ ವಹಿಸಿ ಪೂರಕವಾಗಿ ಶುಭ ಹಾರೈಸಿದರು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಈಶ್ವರ ಅಂ ಕರಿಕಟ್ಟಿ, ಜನಜಾಗೃತಿ ವೇದಿಕೆಯ ಸದಸ್ಯರುಗಳು, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯೋಜನಾಧಿಕಾರಿ ಶ್ರೀಮತಿ ಆಶಾ ಮಹೇಶ್ ರವರು ಕಾರ್ಯಕ್ರಮ ನಿರ್ವಹಿಸಿದರು. ಮೇಲ್ವಿಚಾರಕರಾದ ಪ್ರಕಾಶ್, ಉಮೇಶ್, ಶಿಬಿರ ಅಧಿಕಾರಿ ರಾಜೇಶ್, ಆರೋಗ್ಯ ಸಹಾಯಕಿ ಶ್ರೀಮತಿ ಫಿಲೋಮಿನ ಸಹಕರಿಸಿದರು. ಸಮಾರೋಪ ಸಮಾರಂಭಕ್ಕೆ ಮುಂಚಿತವಾಗಿ ಕುಟುಂಬದ ದಿನ ಕಾರ್ಯಕ್ರಮವನ್ನು ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ನಿರ್ವಹಿಸಿದರು.