ಬೆಂಗಳೂರು ಪ್ರಾದೇಶಿಕ ವಿಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಯೋಜನಾಕಛೇರಿ ವ್ಯಾಪ್ತಿಯ ತಪಸೀಹಳ್ಳಿ ಕಾರ್ಯಕ್ಷೇತ್ರದ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮದಲ್ಲಿ ನಡೆಯುತ್ತಿರುವ 1972ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೋಲೀಸ್ ವೃತ್ತನಿರೀಕ್ಷಕರಾದ ಶ್ರೀಸಾಧಿಕ್ ಫಾಷ ರವರು ಮಾತನಾಡಿ ಸಮಾಜದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥಸೇವೆಯನ್ನು ಸಲ್ಲಿಸುತ್ತ ಸಮಾಜದ ಏಳಿಗೆಯನ್ನು ಬಯಸಿರುವ ಯಾರಾದರು ಇದ್ದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಾತ್ರ ಎಂದು ತಿಳಿಸಿದರು. ಧರ್ಮಾಧಿಕಾರಿಗಳು ನೀಡಿರುವ ಮದ್ಯವರ್ಜನ ಶಿಬಿರದ ಪ್ರಯೋಜನದಿಂದ ಎಲ್ಲಾ ಶಿಬಿರಾರ್ಥಿಗಳು ಪಾನಮುಕ್ತ ಜೀವನವನ್ನು ನಡೆಸುವಂತೆ ತಿಳಿಸಿ ಶುಭಹಾರೖಸಿದರು.

Janajagurthi Vedike Uncategorized