ಬೆಂಗಳೂರು ಪ್ರಾದೇಶಿಕ ವಿಭಾಗದ ಮಧುಗಿರಿಯ ತಾಲೂಕಿನ ಎಂ.ಎಸ್ ರಾಮಯ್ಯ ಮೆಮೋರಿಯಲ್ ಕನ್ವೆನ್ಷನ್ ಸಭಾಭವನದಲ್ಲಿ 1633 ನೇ ಮದ್ಯವರ್ಜನ ಶಿಬಿ ದ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು. ಆರಕ್ಷಕ ವೃತ್ತ ನಿರೀಕ್ಷಕರು ಎಂಎಸ್ ಸರ್ದಾರ್ ರವರು ಉದ್ಘಾಟನೆ ಯನ್ನು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಮದುಗಿರಿ ತಾಲೂಕು ತಹಶೀಲ್ದಾರರು ಶ್ರೀ ಸುರೇಶ ಆಚಾರ್ ರವರು ಮಾಹಿತಿ ನೀಡಿದರು. ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಶ್ರೀ ಮಂಜುನಾಥ, ಸಮಿತಿಯ ಗೌರವಾಧ್ಯಕ್ಷರು ತುಂಗೋಟಿ ರಾಮಣ್ಣ, ಜಿಲ್ಲಾ ವೇದಿಕೆಯ ಸದಸ್ಯರಾದ ಟಿ.ಸಿ ಮಂಜುನಾಥ್, ಲಿಂಗಾ ರೆಡ್ಡಿ, ಸಂಜೀವ ಗೌಡ, ಶ್ರೀಮತಿ ಮಮತಾ, ಶ್ರೀಮತಿ ಸಹನಾ ನಾಗೇಶ್, ಕಾರ್ಯಕ್ರಮದಲ್ಲಿ ಪ್ರಸ್ತಾವನೆಯನ್ನು ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ ಆಚಾರ್ಯ ರವರು ನೆರವೇರಿಸಿದರು. ತಾಲೂಕು ಯೋಜನಾಧಿಕಾರಿ ಶ್ರೀ ದಿನೇಶ್ ಕುಮಾರ್ ಅವರು ಸ್ವಾಗತಿಸಿದರು. ವಲಯದ ಮೇಲ್ವಿಚಾರಕರು ಅನಿತಾ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಮೇಲ್ವಿಚಾರಕರು ಶಿವರಾಜ್ ರವರು ನಿರೂಪಿಸಿದರು. ಶಿಬಿರಾಧಿಕಾರಿ ಶ್ರೀ ಕುಮಾರ್ ಹಾಗೂ ಆರೋಗ್ಯ ಸಹಾಯಕರದ ಶ್ರೀ ವೆಂಕಟೇಶರವರು ಶಿಬಿರಾರ್ಥಿಗಳ ನೋಂದಾವಣೆಯನ್ನು ಮಾಡಿದರು. ಸೇವಾ ಪ್ರತಿನಿಧಿಗಳು ನವ ಜೀವನ ಸಮಿತಿ ಸದಸ್ಯರು ಹಾಗೂ ಶಿಬಿರಾರ್ಥಿಗಳ ಬಂಧುಗಳು ಉಪಸ್ಥಿತರಿದ್ದರು.
