ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದೊಂದಿಗೆ ಗಾಂಧಿ ಜಯಂತಿ ಸಂಭ್ರಮಾಚರಣೆ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧೀ ಸ್ಮೃತಿ ಮತ್ತು ವ್ಯಸನಮುಕ್ತರ ಅಭಿನಂದನಾ ಕಾರ್ಯಕ್ರಮ ವನ್ನು ಡಿ. ಪಿ. ವಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಶ್ರೀಮತಿ ಸುಧಾರಾಣಿ ಲಕ್ಷ್ಮೀ ನಾರಾಯಣ್ ಅಧ್ಯಕ್ಷರು ನಗರಸಭೆ ದೊಡ್ಡಬಳ್ಳಾಪುರ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ರಾಷ್ಟ್ರಪಿತನ ಭಾವಚಿತ್ರಕ್ಕೆ ಎಲ್ಲ ವೇದಿಕೆಯ ಗಣ್ಯರು ಪುಷ್ಪಾರ್ಪಣೆಯನ್ನು ಮಾಡಿದರು.ಶ್ರೀಯುತ ತಿಮ್ಮಯ್ಯ ನಾಯ್ಕ, ಜನಜಾಗೃತಿ ಯೋಜನಾಧಿಕಾರಿಗಳು ಪ್ರಾದೇಶಿಕ ಬೆಂಗಳೂರು ಇವರು ಕಾರ್ಯಕ್ರಮದ ಪ್ರಾಮುಖ್ಯತೆ ಹಾಗೂ ಸದುದ್ದೇಶಗಳ ಕುರಿತು ತಿಳಿಸಿಕೊಟ್ಟರು. ಜಿಲ್ಲಾ ನಿರ್ದೇಶಕರಾದ ಶ್ರೀಯುತ ಉಮರಬ್ಬರವರು ಮಾತನಾಡಿ ಗಾಂಧೀಜಿಯವರು ಕಂಡ ಸ್ವರಾಜ್ಯ ಕನಸುಗಳನ್ನು ನನಸಾಗಿಸಲು ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಸ್ವಾಸ್ಥ ಸಮಾಜವನ್ನು ನಿರ್ಮಾಣದಲ್ಲಿ ಜವಾಬ್ದಾರಿ ಇದೆ ಎಂಬುದನ್ನು ತಿಳಿಸಿದರು
