ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ನಡೆಯಿತು ಈ ಸಭೆಯನ್ನು ಜಿಲ್ಲಾಧ್ಯಕ್ಷರಾದ ಶ್ರೀಮತಿ ವೀಣಾ ರಮೇಶ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ರಾಜ್ಯಾಧ್ಯಕ್ಷರು ಟ್ರಸ್ಟಿಗಳಾದ ಶ್ರೀ ರಾಮಸ್ವಾಮಿಯವರು ಮತ್ತು ಪ್ರಾದೇಶಿಕ ನಿರ್ದೇಶಕರಾದ ಶಿನಪ್ಪ ಎಂ ಜಿಲ್ಲಾ ನಿರ್ದೇಶಕರಾದ ಶ್ರೀ ಉಮರಬ್ಬ ಮತ್ತು ಉಪಾಧ್ಯಕ್ಷರು ಕೋಶಾಧಿಕಾರಿಗಳು ಮತ್ತು ಜಿಲ್ಲಾ ವ್ಯಾಪ್ತಿಯ ತಾಲೂಕುಗಳ ವೇದಿಕೆಯ ಪದಾಧಿಕಾರಿಗಳು ತಾಲೂಕಿನ ಯೋಜನಾಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕ್ರಿಯಾಯೋಜನೆ ಕುರಿತು ವಿವರವಾದ ಚರ್ಚೆ ನಡೆಯಿತು. ಮಧ್ಯವರ್ಜನ ಶಿಬಿರ. ಸ್ವಾಸ್ಥ್ಯ ಸಂಕಲ್ಪ . ನವ ಜೀವನಸಮಿತಿ ಅನುಪಾಲನೆ ಶೌರ್ಯ ಕಾರ್ಯಕ್ರಮ ಇನ್ನಿತರ ವಿಚಾರಗಳ ಕುರಿತು ಚರ್ಚೆ ನಡೆಸಿ ಅನುಷ್ಠಾನ ಮಾಡುವ ಕುರಿತು ತೀರ್ಮಾನಿಸಲಾಯಿತು ಸಭೆಯ ಬಳಿಕ ಇತರ ವಿಚಾರಗಳಕುರಿತು ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ಉತ್ತಮ ಚರ್ಚೆ ನಡೆಯಿತು ಮತ್ತು ಈ ಕುರಿತು ವೇದಿಕೆಯ ಎಲ್ಲಾ ಪದಾಧಿಕಾರಿಗಳು ಕ್ಷೇತ್ರದ ಮೇಲೆ ಮತ್ತು ಪೂಜ್ಯರ ಮೇಲಿನ ಭಕ್ತಿಯಿಂದ ಒಮ್ಮತದಿಂದ ಕಾರ್ಯನಿರ್ವಹಿಸುವಂತೆ ತಿಳಿಸಲಾಯಿತು
