ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಕಾರ್ಯಕ್ರಮ ರಾಯಚೂರು

Janajagurthi Vedike Uncategorized

ಗಾಂಧಿ ಜಯಂತಿ ಪ್ರಯುಕ್ತ ಕೊಪ್ಪಳ ಪ್ರಾದೇಶಿಕ ವಿಭಾಗದ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಶ್ರೀ ಪಂಡಿತ ಸಿದ್ದರಾಮಯ್ಯ ರಂಗಮಂದಿರ ರಾಯಚೂರು ಸಭಾಭವನದಲ್ಲಿ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಕಾರ್ಯಕ್ರಮ ಏರ್ಪಡಿಸಲಾಯಿತು.ರಾಯಚೂರು ನಗರದ ಪ್ರಮುಖ ರಾಜ ಬೀದಿಯಲ್ಲಿ ಜಾಥಾ ಕಾರ್ಯಕ್ರಮ ನೆರವೇರಿಸಿ ಗಾಂಧೀಜಿಯವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.ಸದ್ರಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಧ್ಯಪಾನ ಸಮಯ ಮಂಡಳಿಯ ಅಧ್ಯಕ್ಷರಾದ ಶ್ರೀ ಶರಣಪ್ಪ ಸಲಾದಪುರ ರವರು ಕಾರ್ಯಕ್ರಮ ಉದ್ಘಾಟಿಸಿ, ಗಾಂಧೀಜಿಯವರ ತತ್ವದಂತೆ ಸ್ವಸ್ಥ ಸಮಾಜ ನಿರ್ಮಾಣ ನಾವೆಲ್ಲರೂ ಮಾಡಬೇಕು, ಸ್ವಸ್ತ ಸಮಾಜ ನಿರ್ಮಾಣವಾದರೆ ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾರೆ, ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾಕ್ಟರ್ ಡಿ ವೀರೇಂದ್ರ ಹೆಗಡೆಯವರು ಜನ ಜಾಗೃತಿ ವೇದಿಕೆಯ ಮೂಲಕ ಸರಿ ಸುಮಾರು 2000 ಸಾವಿರ ಶಿಬಿರ ನಡೆಸಿ 1.30.000 ಮಿಕ್ಕಿದ ವ್ಯಸನಿಗಳಿಗೆ ವ್ಯಸನ ಮುಕ್ತರಾಗಲು ಚಿಕಿತ್ಸೆ ನೀಡಿರುವುದು ಶ್ಲಾಘನೀಯ ಸಂಗತಿಯಾಗಿದೆ. ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯರಾದ ಶ್ರೀ. ಷ. ಬ್ರ. ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು, ಸೋಮವಾರಪೇಟೆ ಹಿರೇಮಠ ರಾಯಚೂರು ಅತ್ತನೂರು ವಹಿಸಿದ್ದರು, ಶ್ರೀಮತಿ ನರಸಿಂಹ ನರಸಿಂಹಲು ಮಾಡಗಿರಿ ಮಹಾಪೌರರು ರಾಯಚೂರು,ಶ್ರೀ ಜೆ ಚಂದ್ರಶೇಖರ್ ಪ್ರಾದೇಶಿಕ ನಿರ್ದೇಶಕ ಕೊಪ್ಪಳ ಪ್ರಾದೇಶಿಕ ವಿಭಾಗ, ಶ್ರೀ ಎಂ ಅಮರೇಶ್ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಕೊಪ್ಪಳ, ಶ್ರೀ ಚಂದ್ರಶೇಖರ್ ಪಾಟೀಲ್ ನಿರ್ಜಾಪುರ,ಶ್ರೀಮತಿ ಶರಣಮ್ಮ ಕಾಮರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ರಾಯಚೂರು, ಶ್ರೀ ಮಹಾಂತೇಶ್ ಮಸ್ಕಿ,ಶ್ರೀ ಶ್ರೀಕಾಂತ್ ರಾವ್,ಶ್ರೀ ಮೋಹನ್ ನಾಯ್ಕ್ ಹಾಗೂ ರಾಯಚೂರು ಜಿಲ್ಲೆಯ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಪಾನಮುಕ್ತರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.