“ಬೃಹತ್ ಜನಜಾಗೃತಿ ಜಾಥಾ ಗಾಂಧಿ ಸ್ಮೃತಿ, ವ್ಯಸನ ಮುಕ್ತರ ಸಮಾವೇಶ”

Janajagurthi Vedike Uncategorized

ದಿನಾಂಕ 13/10/2025 ರಂದು ಸಂಕೇಶ್ವರ ವ್ಯಾಪ್ತಿಯ ಶ್ರೀ ದುರದುಂಡೇಶ್ವರ ಸಭಾಭವನ ನಿಡಸೋಸಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಚಿಕ್ಕೋಡಿ ಜಿಲ್ಲೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗ್ರತಿ ವೇದಿಕೆ ಟ್ರಸ್ಟ್ (ರಿ ) ಚಿಕ್ಕೋಡಿ ಜಿಲ್ಲೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಂಕೇಶ್ವರ ತಾಲೂಕ, ಶೌರ್ಯ ವಿಪತ್ತು ಘಟಕಗಳು ಚಿಕ್ಕೋಡಿ ಜಿಲ್ಲೆ, ನವ ಜೀವನ ಸಮಿತಿಗಳು ಚಿಕ್ಕೋಡಿ ಜಿಲ್ಲೆ,ಸಹಕಾರದಿಂದ ಪರಮಪೂಜ್ಯ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಡೆಯವರು ಹಾಗೂ ಮಾತೃಶ್ರೀ ಡಾ// ಹೇಮಾವತಿ ವೀ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ “ಬೃಹತ್ ಜನಜಾಗೃತಿ ಜಾಥಾ ಗಾಂಧಿ ಸ್ಮೃತಿ, ವ್ಯಸನ ಮುಕ್ತರ ಸಮಾವೇಶ” ಜರುಗಿತು, ಕಾರ್ಯಕ್ರಮದಲ್ಲಿ ಶ್ರೀ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ, ಶ್ರೀ ಮ. ನಿ. ಪ್ರ ಸಂಪಾದನಾ ಮಹಾಸ್ವಾಮಿಗಳು ಜಗದ್ಗುರು ಸಂಪಾದನಾ ಚರಮೂರ್ತಿ ಮಠ ಚಿಕ್ಕೋಡಿ, ಪೂಜ್ಯರ ದಿವ್ಯ ಸಾನಿಧ್ಯ ವಹಿಸಿ ಎಲ್ಲರಿಗೂ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಚಿದಾನಂದ ಎ ಪಾಟೀಲ ತಾಲೂಕ ಉಪ ತಹಶೀಲ್ದಾರರು ಸಂಕೇಶ್ವರ ಇವರು ನೆರವೇರಿಸಿದರು, ಅಧ್ಯಕ್ಷತೆಯನ್ನು ಶ್ರೀ ಶ್ರೀಪಾಲ್ ಮುನ್ನೋಳಿ ಸ್ಥಾಪಕಾಧ್ಯಕ್ಷರು ಜಿ. ಜ. ವೇದಿಕೆ ಟ್ರಸ್ಟ್ (ರಿ ) ಚಿಕ್ಕೋಡಿ ಇವರು ವಹಿಸಿದ್ದರು, ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಶ್ರೀ S. R. ಬೇವಿನಕಟ್ಟಿ ಪೊಲೀಸ್ ಇಲಾಖೆ ಸಂಕೇಶ್ವರ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಶ್ರೀ ದೇವರಾಜ ಯೋಜನಾಧಿಕಾರಿಗಳು ಪ್ರಾದೇಶಿಕ ಕಚೇರಿ ಧಾರವಾಡ,ಶ್ರೀ ರಾಜಶೇಖರ ಚೌಗಲಾ ವಕೀಲರು ಸಂಕೇಶ್ವರ, ಶ್ರೀ ಪ್ರೋ. ಪಿ. ಜಿ.ಕೊಣ್ಣೂರ ಉಪಾಧ್ಯಕ್ಷರು ಜಿ. ಜ.ವೇದಿಕೆ (ರಿ ) ಚಿಕ್ಕೋಡಿ, ಶ್ರೀ ವಿಠ್ಠಲ್ ಸಾಲ್ಯಾನ್ ಜಿಲ್ಲಾ ನಿರ್ದೇಶಕರು ಚಿಕ್ಕೋಡಿ ಜಿಲ್ಲೆ, ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಎಲ್ಲಾ ಪದಾಧಿಕಾರಿಗಳು, ಶೌರ್ಯ ಘಟಕದ ಸದಸ್ಯರು ಭಾಗವಹಿಸಿರುತ್ತಾರೆ ಈ ಸಂದರ್ಭ ಪಾನ ಮುಕ್ತ ಸದಸ್ಯರಿಗೆ ಅಭಿನಂದಿಸಲಾಯಿತು. ಜಿಲ್ಲೆಯ ಎಲ್ಲಾ ತಾಲೂಕಿನ ಯೋಜನಾಧಿಕಾರಿಯವರು, ಕಾರ್ಯಕರ್ತರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿರುತ್ತಾರೆ.ಕಾರ್ಯಕ್ರಮದ ನಿರೂಪಣೆ ಮೇಲ್ವಿಚಾರಕಾರದ ಶ್ರೀ ಭಾಸ್ಕರ್ ಕೆ, ಶ್ಯಾಮ್ ನಿರ್ವಹಿಸಿದರು, ಸ್ವಾಗತವನ್ನು ಶ್ರೀ ವಿಠ್ಠಲ್ ಸಾಲ್ಯಾನ್ ಜಿಲ್ಲಾ ನಿರ್ದೇಶಕರು, ಹಾಗೂ ವಂದನಾರ್ಪಣೆ ಯನ್ನು ಶ್ರೀ ವಿನಾಯಕ ಕಾಕಂಬಿ ತಾಲೂಕಾ ಯೋಜನಾಧಿಕಾರಿ ನಡೆಸಿಕೊಟ್ಟರು.