ಬಾದಾಮಿ ತಾಲೂಕಿನ ಕೆರೂರಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ವನ್ನು ಬಾದಾಮಿ ತಾಲೂಕಿನ ಮಾಜಿ ಶಾಸಕರಾದ ಶ್ರೀ ಎಂ. ಕೆ. ಪಟ್ಟಣ ಶೆಟ್ಟಿಯವರು ಉದ್ಘಾಟಿಸಿದರು. ಉಪ ತಹಶಿಲ್ದಾರರಾದ ಶ್ರೀ ಆರ್. ಎಸ್ ಸಾತಿಹಾಳ್ ರವರು ಗಾಂಧಿ ಜೀ ಮತ್ತು ಲಾಲಬಹಾದ್ದೂರ ಶಾಸ್ತ್ರಿಜೀ ಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಡಾ. ಎಮ್. ಜಿ ಕಿತ್ತಲಿಯವರು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದಿಸಿ, ಜಾಗೃತಿ ಅಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಮಹೇಶ್ ಎಂ.ಡಿ ಯವರು ನವಜೀವನ ಸಮಿತಿಯ ಸದಸ್ಯರಿಗೆ ಅಭಿನಂದಿಸಿ, ಶುಭಹಾರೈಸಿದರು. ಸಭೆಯಲ್ಲಿ ಪಟ್ಟಣಪಂಚಾಯ್ತ ಮಾಜಿ ಉಪಾಧ್ಯಕ್ಷರಾದ ಶ್ರೀ ಕುಮಾರ ಐಹೊಳೆಯವರು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಹೇಮಂತ ದೊಡ್ಡಮನೆ, ಶ್ರೀ ಅನಿಲ್ ಚಪಲಗಾವಂ, ಶರಣಪ್ಪ ಹಾಗೂ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ಮಾಧವ ನಾಯಕ, ತಾಲೂಕು ಯೋಜನಾಧಿಕಾರಿ ಶ್ರೀಗಣೇಶ ನಾಯ್ಕ, ಪರ್ತಕರ್ತರಾದ ಶ್ರೀ ಆರ್ . ನಿಡೋಣಿಯವರು ಉಪಸ್ಥಿತರಿದ್ದರು.
