ಬಾಣಾವರ ಯೋಜನಾ ವ್ಯಾಪ್ತಿಯ ಬಾಣಾವರದ ಕಾಳಿಕಾ೦ಭ ಸಮುದಾಯ ಭವನದಲ್ಲಿ ನಡೆದ 1536 ನೇ ಮ.ಶಿಬಿರದ ಸಮಾರೋಪ ಸಮಾರಂಭ ನಡೆಯಿತು.ಸಮಾರಂಭದಲ್ಲಿ ಮಲ್ಲೇಶ್ ಗೌಡ್ರು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಹಾಸನ ಮಾತಾಡಿ.. ಮನುಷ್ಯ ಕನಿಷ್ಟನಾಗುವುದು ದುಶ್ಚಟಗಳಿಗೆ ಬಳಿಬಿದ್ದಾಗ, ಅದರಿಂದ ಹೊರಬರಲು ಯೋಜನೆ ರೂಪಿಸಿದ ಕಾರ್ಯಕ್ರಮ ನಿಜವಾಗಿಯೂ ಅಭಿನಾ೦ದನಾಹ೯ ಎ೦ದರು. ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಪಿ.ಗ೦ಗಾಧರ ರೈ ಮಾತಾಡಿ ..ದುಶ್ಚಟ & ಕುಡಿತ ಮನುಷ್ಯನ ಸವ೯ನಾಶಕ್ಕೆ ಮೂಲಕಾರಣ..
ಇದರಿಂದಾಗಿ ಕಣ್ಣಿರು ಸುರಿಸುತ್ತೀರುವ ಕುಟುಂಬದ ಪಾಳಿಗೆ ಪೂಜ್ಯ ದ೦ಪತಿಗಳು& ಯೋಜನೆ ರೂಪಿಸಿದ ಕಾರ್ಯಕ್ರಮದಿ೦ದ ಈ ತನಕ 1.32 ಸಾವಿರ ಮ೦ದಿಯ ಬದುಕು ಸಾಥ೯ಕವಾಗಿದೆ ಎ೦ದರು.ವೇದಿಕೆಯಲ್ಲಿ ಸಮಿತಿ ಅಧ್ಯಕ್ಷರಾದ ಭಾಗ್ಯಮ್ಮ ನ೦ಜು೦ಡ ಶೆಟ್ಟಿ , ಗೌರವಾಧ್ಯಕ್ಷರಾದ ಶ್ರೀನಿವಾಸ್ , ಜಿಲ್ಲಾ ನಿರ್ದೇಶಕರಾದ ಮಮತಾ ಹರೀಶ್ ರಾವ್ ,ತಾಲ್ಲೂಕು ಪಂಚಾಯತ್ ಸದಸ್ಯರಾದ ಶ್ರೀಧರ ,ಜನಜಾಗೃತಿ ಉಪಾಧ್ಯಕ್ಷರಾದ ಮಹೇಶ್ ಬಂದೂರು ಸಂದರ್ಭಕ್ಕೆ ಅನುಗುಣವಾಗಿ ಮಾತನಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭ ಯೋಜನಾಧಿಕಾರಿಗಳಾದ ಜಯಂತ್, ಭಾಸ್ಕರ್,ಶಿಬಿರಾಧಿಕಾರಿ ನಂದಕುಮಾರ್, ಆರೋಗ್ಯ ಸಹಾಯಕಿ ಶ್ರೀಮತಿ ಜಯಲಕ್ಷ್ಮಿ, ಮೇಲ್ವಿಚಾರಕರಾದ ತಾರಾಮಣಿ, ಸೇವಾಪ್ರತಿನಿಧಿಗಳು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
