ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲೂಕು, ಬಾಗಲಕೋಟೆ ವಲಯದ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ 1636 ನೇ ಮಧ್ಯವರ್ಜನ ಶಿಬಿರದ ಎಂಟನೇ ದಿನದಲ್ಲಿ ಕುಟುಂಬ ದಿನ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕೊಪ್ಪಳ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿಗಳಾದ ಶ್ರೀಯುತ ಮಾಧವ ನಾಯ್ಕ್ ರವರು ನೆರವೇರಿಸಿ ಕೊಟ್ಟರು, ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀಯುತ ರಾಜಣ್ಣ ಕೊರವಿ ಅವರು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ರಾಜು ನಾಯ್ಕರ್ ರವರು, ಬಾಗಲಕೋಟೆ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಜ್ಯೋತಿ ಜೋಳದ್ ರವರು, ಸಮಿತಿ ಉಪಾಧ್ಯಕ್ಷರುಗಳಾದ ಆನಂದ ಮತ್ತು ರಮೇಶ್ ಅವರು, ಶಿಬಿರದ ಜವಾಬ್ದಾರಿ ಮೇಲ್ವಿಚಾರಕರಾದ ಮಹೇಶ್ ಮತ್ತು ಮಾಂತೇಶ್ ರವರು, ತಾಲೂಕು ಕೃಷಿ ಅಧಿಕಾರಿಗಳಾದ ಶ್ರೀಯುತ ದ್ಯಾಮಣ್ಣ ರವರು, ಕೊಪ್ಪಳ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ಶ್ರೀಯುತ ಅವಿನಾಶ್ ರವರು, ಆರೋಗ್ಯ ಕಾರ್ಯಕರ್ತರು ಕುಮಾರಿ ರಂಜಿತ ರವರು , ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ತಂಡದ ಸದಸ್ಯರು,ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು,
